ಅವೈಜ್ಞಾನಿಕ ರಸ್ತೆ ಅಗಲೀಕರಣ: ಎಂ.ವಿರೂಪಾಕ್ಷಿ ಆರೋಪ

oplus_2
oplus_2
Published on

ರಾಯಚೂರು: ನಗರದ ಡ್ಯಾಡಿ ಕಾಲನಿ ರಸ್ತೆಯನ್ನು ಅಗಲೀಕರಣ ಮಾಡುವ ಕಾರ್ಯಕ್ಕೆ ಜಿಲ್ಲಾಡಳಿತ, ನಗರಸಭೆ ಮುಂದಾಗಿದ್ದು, ರಸ್ತೆಯನ್ನು ಅತಿಕ್ರಿಮಿಸಿಕೊಂಡ ಮನೆಗಳ ರಕ್ಷಣೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಡ್ಯಾಡಿ ಕಾಲನಿ ರಸ್ತೆಯನ್ನು ಮುಖ್ಯಮಂತ್ರಿಗಳ ವಿಶೆಷ ಅನುದಾನದಲ್ಲಿ ನಿರ್ಮಾಣ ಮಾಡಲು ನಗರಸಭೆ ಮುಂದಾಗಿದ್ದು, 60 ಅಡಿ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಕೆಇಬಿ ನೌಕರರ ನಿವೇಶನಗಳನ್ನು ಕೆಡವಲು ಮುಂದಾಗಿರುವ ಅಧಿಕಾರಿಗಳು, ರಸ್ತೆಯ ಮತ್ತೊಂದು ಕಡೆಯಿರುವ ಖಾಸಗಿ ವ್ಯಕ್ತಿಗಳ ಮನೆಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಸ್ತೆಯ ಮಧ್ಯೆಭಾಗದಿಂದ ಎರಡು ಬದಿಗಳಿಗೆ 30-30 ಅಡಿ ರಸ್ತೆಯನ್ನು ಅಳತೆ ಮಾಡಬೇಕು ಆದರೆ ಕೇವಲ ಕೆಇಬಿ ಕಾಂಪೌಂಡ್ ಕಡೆ 60 ಅಡಿ ಅಳತೆ ಮಾಡಿ ಗುರುತು ಮಾಡಲಾಗಿದೆ. ಇನ್ನೊಂದು ಬದಿ ಗುರುತು ಮಾಡಿಲ್ಲ. ಕೆಇಬಿ ನೌಕರರಿಗೆ ನಗರಸಭೆಯಿಂದ ದಿನಾಂಕವಿಲ್ಲದ ನೋಟೀಸ್ ನೀಡಿ ನಿವೇಶನ ಖಾಲಿ ಮಾಡುವಂತೆ ಸೂಚಿಸಲಾಗಿದೆ. ರಾಜಕೀಯ ಒತ್ತಡಗಳಿಗೆ ಮಣಿದು ನಗರಸಭೆ ಮತ್ತು ಜಿಲ್ಲಾಡಳಿತದಿಂದ ಕರ್ತವ್ಯಲೋಪ ಎಸಗಲಾಗುತ್ತಿದೆ.
ಕೂಡಲೇ ನಿಯಮಾನುಸಾರ ರಸ್ತೆಯ ಎರಡು ಬದಿಗಳಲ್ಲಿ ಸಮಾನಾಗಿ ಅಳತೆ ಮಾಡಿ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಣ್ಣ ನರಸಂಹ ನಾಯಕ, ಭೀಮರೆಡ್ಡಿ, ಹಂಪಯ್ಯ ನಾಯಕ, ನರಸಪ್ಪ, ನಾಗರಾಜ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net