ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೀನು ಸಾಕಣೆ ಹೊಂಡದಲ್ಲಿ ಮೊಸಳೆ ಪತ್ತೆ

20012021 Raichur crocodile discovered
Published on

ರಾಯಚೂರು: ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿನ ಮೀನು ಸಾಕಣೆ ಹೊಂಡದಲ್ಲಿ ಬುಧವಾರ ಮೊಸಳೆ ಪತ್ತೆಯಾಗಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದ ನಂತರ ಜನ ನಿಟ್ಟುಸಿರು ಬಿಟ್ಟರು.

ಹೊಂಡದಲ್ಲಿ ಮೊಸಳೆಯನ್ನು ಮೊದಲು ಕಂಡ ವಿವಿ ಸಿಬ್ಬಂದಿ ಆತಂಕಗೊಂಡರಲ್ಲದೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಚಂದ್ರಣ್ಣ ನೇತೃತ್ವದಲ್ಲಿ ಸಿಬ್ಬಂದಿ ಮೊಸಳೆ ಹಿಡಿಯುವಲ್ಲಿ ಯಶಸ್ವಿಯಾದರು.

ವಲಯ ಅರಣ್ಯಾಧಿಕಾರಿ ರಾಜೇಶ ಗುಳಗಿನ, ಉಪವಲಯ ಅರಣ್ಯಾಧಿಕಾರಿ ರಾಜಶೇಖರ್, ಅರಣ್ಯ ರಕ್ಷಣ ಸೂಗಣ್ಣ, ಕೃಷಿ ವಿವಿಯ ಸುಧಾಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೀನು ಸಾಕಣೆ ಹೊಂಡಕ್ಕೆ ಮೊಸಳೆ ಹೇಗೆ ಬಂತು, ಯಾವಾಗ ಬಂದಿತ್ತು ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net