

ರಾಯಚೂರು ರಾಯಚೂರು ಸ್ನಾತಕೋತ್ತರ ಕೇಂದ್ರವು ಪೂರ್ಣ ಪ್ರಮಾಣದಲ್ಲಿ ರಾಯಚೂರು ವಿಶ್ವವಿದ್ಯಾಲಯ ಆಗಿ ಕಾರ್ಯಾರಂಭಿಸಿದರೂ ಪರಿಸ್ಥಿತಿ ಸುಧಾರಿಸುವ ಲಕ್ಷಣವಿಲ್ಲ. ಆಗಲೂ ಈಗಲೂ ಅತಿಥಿ ಬೋಧಕರ ಮೇಲೆಯೇ ವಿವಿ ನಿರ್ವಹಣೆಯಾಗುತ್ತಿದ್ದು, ಉನ್ನತ ಶಿಕ್ಷಣಕ್ಕೆ ಸರ್ಕಾರದ ತಾತ್ಸಾರ ಎದ್ದು ಕಾಣುತ್ತಿದೆ. ರಾಯಚೂರು ಹಾಗೂ ಯಾದಗಿರಿ ಸೇರಿದಂತೆ ರಾಯಚೂರು ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಿದರೂ ಹಣೆಬರೆಹ ಮಾತ್ರ ಬದಲಾಗುವಂತೆ ಕಾಣುತ್ತಿಲ್ಲ. ಕಾಯಂ ಬೋಧಕ ಹಾಗೂ ಬೊಧಕೇತರ ಸಿಬ್ಬಂದಿ ಕೊರತೆ ಕಾಡುತ್ತಿರುವುದು ವಿವಿ ಪ್ರಗತಿಗೆ ಅಡ್ಡಗಾಲಾಗಿದೆ.
ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಪದವಿ ಹಾಗೂ ಸ್ನಾತಕೊತ್ತರ ಪದವಿ ಸೇರಿ ೧೯೪ ಕಾಲೇಜುಗಳಲ್ಲಿ ಒಟ್ಟು ೫,೧೩,೩೩೯ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಆದರೆ ವಿದ್ಯಾರ್ಥಿಗಳಿಗೆ ಭೋದನೆ ಮಾಡಬೇಕಾದ ಉಪನ್ಯಾಸಕರು ಇಲ್ಲದೆ ಇರುವುದರಿಂದ ಸಾಕಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಅತಿಥಿ ಉಪನ್ಯಾಸಕರೇ ಆಸರೆ
ರಾಯಚೂರು ವಿವಿಯಲ್ಲಿ ಎಂಎ, ಎಂಕಾA, ಎಸ್ಸಿ ಜತೆಗೆ ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸö, ರಾಜ್ಯಶಾಸö ಪತ್ರಿಕೋದ್ಯಮ, ಸಮಾಜ ವಿe್ಞÁನ, ಮಹಿಳಾ ಅಧ್ಯ ಉರ್ದು ಮತ್ತು ಪರ್ಷಿಯನ್, ಗ್ರಂಥಾಲಯ ಮತ್ತು ಮಾಹಿತಿ ವಿe್ಞÁನ, ವಿe್ಞÁನ ತಂತ್ರe್ಞÁನ, ಗಣಕಯಂತ್ರ ವಿe್ಞÁನ, ರಸಾಯನ ಶಾಸö, ಭೌತ ಶಾಸöಓದುವ ಅವಕಾಶ ವಿದ್ದು, ಸ್ನಾತಕೊತ್ತರ ಪದವಿಯಲ್ಲಿ ೫,೪೭೦ ಜನ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿz್ದÁರೆ. ೨೦೨೨ರಿಂದ ೮೫ ಅತಿಥಿ ಉಪನ್ಯಾಸಕರು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿz್ದÁರೆ.
ವಿವಿಯಲ್ಲಿ ನಿತ್ಯ ತರಗತಿಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು, ಪೂರ್ಣ ಪ್ರಮಾಣದ ಅತಿಥಿ ಉಪನ್ಯಾಸಕರಿಗೆ ವಾರಕ್ಕೆ ೧೬ ಗಂಟೆ ಮಾತ್ರ ಬೋಧನೆ ಮಾಡಬೇಕು. ಅಲ್ಪ ಪ್ರಮಾಣದ ಅತಿಥಿ ಉಪನ್ಯಾಸಕರಿಗೆ ವಾರದಲ್ಲಿ ೬ ಗಂಟೆ ಮಾತ್ರ ತರಗತಿ ನೀಡಲಾಗುತ್ತಿದ್ದು, ಇವರಿಗೆ ಬೋಧನೆ ಅಲ್ಲದೆ ತರಗತಿಗೆ ಬಾರದ ವಿದ್ಯಾರ್ಥಿಗಳಿಗೆ ಕರೆ ಮಾಡಿ ತಿಳಿಸುವುದು, ಬೋಧಕೇತರ ಕೆಲಸ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಸಿಬ್ಬಂದಿ ನೇಮಕಕ್ಕೆ ಮನವಿ
ಗುಲ್ಬರ್ಗ ವಿಶ್ವ ವಿದ್ಯಾಲಯದಿಂದ ಬೇರ್ಪಟ್ಟು ಹೊಸದಾಗಿ ರಾಯಚೂರು ವಿಶ್ವ ವಿದ್ಯಾಲಯ ಮಂಜೂರುರಾದ ನಂತರ ಸರ್ಕಾರ ವಿವಿಗೆ ಯಾವುದೇ ಭೋದಕ ಸಿಬ್ಬಂದಿಗಳನ್ನು ನೇಮಕ ಮಾಡಲಿಲ್ಲ. ಆದರಿಂದ ಈ ಹಿಂದಿನ ಕುಲಪತಿ ಪ್ರೋ.ಹರೀಶ್ ರಾಮಸ್ವಾಮಿ ಅವರು ಸರ್ಕಾರಕ್ಕೆ ಪತ್ರ ಬರೆದು ಹೊಸ ವಿವಿಗೆ ಸುಮಾರು ೧೭೫ ಸಿಬ್ಬಂದಿ ನೇಮಕಕ್ಕೆ ಮನವಿ ಸಲ್ಲಿಸಿದ ನಂತರ ೨೦೨೩ರಲ್ಲಿ ವಿವಿಯ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಕೇವಲ ೩೧ ಹುz್ದೆಗಳು ಮಾತ್ರ ಮಂಜೂರಾಗಿದ್ದು,
ಇದರಲ್ಲಿ ೨ ಪ್ರೊ-Éಸರ್, ೫ ಅಸಿಸ್ಟೆಂಟï, ೨೪ ಅಸಿಸ್ಟೆಂಟï ಪ್ರೊ-Éಸರ್ ಹುz್ದÉಗಳನ್ನು ನೀಡಲಾಯಿತು. ಈ ಪೈಕಿ ೨ ಪ್ರೊ-Éಸರ್ ಹುದ್ದೆಯಲ್ಲಿ ೩೭೧ಜೆ ಪರಿಶಿಷ್ಟ ಜಾತಿಗೆ ಮೀಸಲಿರುವುದರಿಂದ ಅರ್ಹ ಅಭ್ಯರ್ಥಿ ಬರಲಿಲ್ಲ, ೫ ಅಸಿಸ್ಟೆಂಟï ಪ್ರೊ-Éಸರ್ ಪೈಕಿ ೩ ಜನ ಮಾತ್ರ ಅರ್ಹರಾಗಿದ್ದು, ಉಳಿದ ೨೪ ಅಸಿಸ್ಟೆಂಟï ಪ್ರೊ-Éಸರ್ ಹುದ್ದೆಗಳಿಗೆ ಕೆಇಎ ಮೂಲಕ ಪರೀಕ್ಷೆ ಬರೆಯಲಾಗಿದ್ದು, ಜನವರಿ ತಿಂಗಳಲ್ಲಿ -Àಲಿತಾಂಶ ಪ್ರಕಟಣೆಯಾಗಿದ್ದು, ಶೀಘ್ರದಲ್ಲಿ ನೇಮಕವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬೋಧಕೇತರ ಸಿಬ್ಬಂದಿ ಕೊರತೆ
ರಾಯಚೂರು ವಿಶ್ವವಿದ್ಯಾಲಯದಲ್ಲಿ ಒಟ್ಟು ೬೭೨ ಹುದ್ದೆಗಳ ಪೈಕಿ ಗುಲ್ಬರ್ಗ ವಿಶ್ವ ವಿದ್ಯಾಲಯದಿಂದ ೧೬೫ ಹುದ್ದೆಗಳು ಹಾಗೂ ವಿವಿಧ ಏಜೆನ್ಸಿಗಳ ಮೂಲಕ ೨೮೫ ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ೨೮೫ ಹುದ್ದೆಗಳನ್ನು ತಾತ್ಕಾಲಿಕವಾಗಿ ಮುಂದುವರೆಸಿದ್ದು, ಪ್ರಸ್ತುತವಾಗಿ ಒಟ್ಟು ೨೨೨ ಹುದ್ದೆಗಳು ಖಾಲಿ ಇದ್ದು, ಇದರಿಂದ ಕಾರ್ಯ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿಗಳಿಗೆ ಕೆಲಸ ಒತ್ತಡ ಹೆಚ್ಚಳವಾಗಿದೆ.
ರಾಯಚೂರು ವಿಶ್ವ ವಿದ್ಯಾಲಯಕ್ಕೆ ಸರ್ಕಾರ ೨೦೨೩ ರಲ್ಲಿ ೩೧ ಪ್ರಾಧ್ಯಾಪಕರ ಹುದ್ದೆಗಳ ಮಂಜೂರು ಮಾಡಿದ್ದು, ಈ ಪೈಕಿ ಪ್ರೊ-Éಸರ್‌ಗೆ ಯಾವ ಅರ್ಹ ಅಭ್ಯರ್ಥಿ ದೊರೆತಿಲ್ಲ. ೫ ಅಸಿಸ್ಟೆಂಟï ಪ್ರೊ-Éಸರ್ ಪೈಕಿ ೩ ಜನ ಮಾತ್ರ ಅರ್ಹರಾಗಿದ್ದು, ಉಳಿದ ೨೪ ಅಸಿಸ್ಟೆಂಟï ಪ್ರೊ-Éಸರ್ ಹುದ್ದೆಗಳಿಗೆ ಕೆಇಎ ಮೂಲಕ ಪರೀಕ್ಷೆ ಬರೆಯಲಾಗಿದ್ದು, ಜನವರಿ ತಿಂಗಳಲ್ಲಿ ಪಲಿತಾಂಶ ಪ್ರಕಟಣೆಯಾಗಿದ್ದು, ಶೀಘ್ರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ಡಾ.ಸುಯಮಿಂದ್ರ ಕುಲಕರ್ಣಿ ಹಂಗಾಮಿ ಕುಲಪತಿ ರಾಯಚೂರು ವಿವಿ