ನಿಗಧಿಪಡಿಸಿದ ಶುಲ್ಕವಷ್ಟೆ ಸಂಗ್ರಹ: ಸುಯಮೀಂದ್ರ ಕುಲಕರ್ಣಿ

IMG-20241210-WA0002
Published on

ರಾಯಚೂರು: ಸರ್ಕಾರದ ಮಾರ್ಗಸೂಚಿ ಅನ್ವಯ ವಿಶ್ವವಿದ್ಯಾಲಯದಿಂದ ಗುಣಮಟ್ಟದ ಬೋಧನೆಯ ಮೂಲಕ ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, ಕಲಿಕೆಗೆ ಅವಶ್ಯಕವಿರುವ ಶೈಕ್ಷಣಿಕ ಪರಿಸರ ಹಾಗೂ ವಾತಾವರಣ ನಿರ್ಮಿಸುವ ಜವಾಬ್ದಾರಿಯನ್ನು ವಿಶ್ವವಿದ್ಯಾಲಯ ಹೊಂದಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ಸುಯಮಿಂದ್ರ ಕುಲಕರ್ಣಿ ಹೇಳಿದರು.

ರಾಯಚೂರು ವಿವಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ರಾಯಚೂರು ವಿವಿಯ ಕುರಿತು ಸುಳ್ಳು ಸಂದೇಶಗಳು ರವಾನೆಯಾಗುತ್ತಿದ್ದು, ವಿಶ್ವವಿದ್ಯಾಲಯದಲ್ಲಿ ಸಂಯೋಜನೆ ಪಡೆದ ಕಾಲೇಜುಗಳಿಂದ ಅಕ್ರಮವಾಗಿ ಠೇವಣಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕಾಲೇಜುಗಳ ಸಂಯೋಜನೆಗಿರುವ ಪ್ರತ್ಯೇಕ ತಂತ್ರಾಂಶದಿಂದ ಪರಿಶೀಲನೆಗೊಂಡು ನಿಗಧಿಪಡಿಸಿದ ಶುಲ್ಕವನ್ನಷ್ಟೆ ಪಡೆಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಕಲ್ಲಿ ಕುಲಸಚಿವ ಡಾ.ಶಂಕರ ವಣಕ್ಯಾಳ, ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ರಾಘವೇಂದ್ರ ಪತ್ತೆಪೂರು ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net