

ರಾಯಚೂರು: ನಗರದ ಹೊರವಲಯದ ಅಸ್ಕಿಹಾಳ ಗ್ರಾಮದ ಎನ್‌ಜಿಒ ಕಾಲನಿಯ ಮನೆಯೊಂದರಲ್ಲಿ ಸೋಮವಾರ ಮದ್ಯಾಹ್ನ ಕಳ್ಳತನವಾಗಿದೆ.
ರಾಯಚೂರಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಅವರ ಮನೆಯ ಬೀಗ ಮುರಿದ ನಾಲ್ಕು ಜನ ಖದೀಮರು, ಬೀರುವಿನಲ್ಲಿದ್ದ 12.14 ಗ್ರಾಂ ಚಿನ್ನದ ನಕ್ಲೆಸ್, 0.5 ಗ್ರಾಂ. ಚಿನ್ನದ ಜುಮುಕಿ ಹಾಗೂ 50 ಸಾವಿರ ನಗದು ಕಳುವು ಮಾಡಿದ್ದಾರೆ.
ಮನೆ ಮಾಲಿಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಮನೆಯ ಹತ್ತಿರದ ಸಿಸಿಟಿವಿಯಲ್ಲಿ ಒಬ್ಬ ಕಳ್ಳನ ಚಲನವಲನದ ದೃಶ್ಯಗಳು ದೊರೆತ್ತಿದೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.