ಆ.10ರಂದು ರಂಗಮಂದಿರದಲ್ಲಿ ಸಂಗೀತ ಕಾರ್ಯಕ್ರಮ: ರೆಡ್ಡಿ ತಿಮ್ಮಯ್ಯ

Reddy thimmayya
ರೆಡ್ಡಿ ತಿಮ್ಮಯ್ಯ
Published on

ರಾಯಚೂರು: ಗೆಳೆಯರ ಸಾಂಸ್ಕೃತಿಕ ವೇದಿಕೆಯಿಂದ ಕನ್ನಡ ಸೇರಿದಂತೆ ಇತರೆ ಭಾಷೆಗಳ ಚಿತ್ರಗೀತೆಗಳ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ರೆಡ್ಡಿ ತಿಮ್ಮಯ್ಯ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಆ.10ರ ಸಂಜೆ 5:30ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ವೈದ್ಯ ಎ.ಎಸ್ ಆನಂದ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಹಿರಿಯ ವಕೀಲ ಕೆ.ದೇವಣ್ಣ ನಾಯಕ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಕೀಲರಾದ ಮಲ್ಲಿಕಾರ್ಜುನ, ಶ್ರೀಕಾಂತರಾವ್, ಎಚ್.ಜಗದೀಶ್, ಬಿ.ನಾಗಪ್ಪ, ಮಾಜಿ ಆರ್‌ಡಿಎ ಅಧ್ಯಕ್ಷ ಗೋವಿಂದ, ನಿವೃತ್ತ ಮೋಟಾರು ನಿರೀಕ್ಷಕ ವೆಂಕಟೇಶ್ವರ ರಾವ್ ಅವರು ಉಪಸ್ಥಿತರಿರಲಿದ್ದು, ಕನ್ನಡ, ಹಿಂದಿ, ತೆಲುಗು ಚಿತ್ರಗೀತೆಗಳನ್ನು ಗಾಯನ ಮಾಡಲಾಗುವುದು ಜತೆಗೆ ಜಾಲಿಫ್ರೆಂಡ್ಸ್ ಮ್ಯೂಜಿಕಲ್ ಅಕಾಡೆಮಿ ಕಲಾವಿದರಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮೋಹನ್, ಶ್ರೀನಿವಾಸ್, ವೀರೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net