ರಾಯಚೂರಲ್ಲಿ ನಿರ್ಗತಿಕರಿಗೆ ಉಚಿತ ಊಟ ನೀಡಿ ಮಾನವೀಯತೆ ಮೆರೆದ ಇಬ್ಬರು

Corona Lockdown Effet Free Lunch at Raichur
Published on

ರಾಯಚೂರು: ಕರೊನಾ ಸೋಂಕು ಹರಡುವ ಭೀತಿಯಿಂದಾಗಿ ರಾಜ್ಯವನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಇದರಿಂದ ನಿರ್ಗತಿಕರು ಹಾಗೂ ಪರ ಊರಿನಿಂದ ಬಂದವರು ಊಟ ಸಿಗದೇ ಪರದಾಡುತ್ತಿದ್ದು, ಅವರಿಗೆ ಊಟದ ಪಾಕೆಟ್‌ಗಳನ್ನು ನೀಡುವ ಮೂಲಕ ಇಬ್ಬರು ಮಾನವೀಯತೆ ಮೆರೆಯುತ್ತಿದ್ದಾರೆ.

ಹೋಟೆಲ್, ರಸ್ತೆ ಪಕ್ಕದ ತಳ್ಳು ಬಂಡಿಗಳನ್ನು ಬಂದ್ ಮಾಡಿಸಲಾಗಿದೆ. ಮತ್ತೊಂದೆಡೆ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ಬೀಸುತ್ತಿದ್ದರಿಂದ ನಿರ್ಗತಿಕರು ಹಾಗೂ ಪರ ಊರಿನಿಂದ ನಗರಕ್ಕೆ ಬಂದವರು ಊಟಕ್ಕಾಗಿ ಪರದಾಡುತ್ತಿರುವುದನ್ನು ಕಂಡು ಶಶಿಧರ ಗಡಗಿ ಮತ್ತು ಸುರೇಶ ಎಂಬುವವರು ಅವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಅನ್ನ, ಸಾಂಬರ್‌ನ ಪಾಕೆಟ್‌ಗಳನ್ನು ಮಾಡಿ ಅವುಗಳನ್ನು ರಸ್ತೆ ಪಕ್ಕದಲ್ಲಿನ ನಿರ್ಗತಿಕರಿಗೆ ವಿತರಿಸುತ್ತಿದ್ದು, ಪರ ಊರಿನಿಂದ ಬಂದು ಬಸ್ ನಿಲ್ದಾಣದಲ್ಲಿರುವವರಿಗೂ ಪಾಕೆಟ್‌ಗಳನ್ನು ನೀಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಸುಮಾರು 80ಕ್ಕೂ ಹೆಚ್ಚು ಪಾಕೆಟ್‌ಗಳನ್ನು ವಿತರಿಸುತ್ತಿದ್ದು, ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net