ಬಾಡಿಗೆದಾರನಿಂದಲೇ ಮನೆ ಒನರ್ ಹತ್ಯೆ

case raichur
Published on

ರಾಯಚೂರು: ಮನೆಯ ಮಾಲಕಿಯನ್ನು ಬಾಡಿಗೆದಾರನ್ನೊಬ್ಬ ಕೊಲೆ ಮಾಡಿದ ಘಟನೆ ನಗರದ ಸ್ಟೇಷನ್ ರಸ್ತೆಯ ಪ್ರಶಾಂತ ನಗರದಲ್ಲಿ ಸೆ.21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಶೋಭಾ(63) ಮೃತಪಟ್ಟಿದ್ದು, ಮನೆಯಲ್ಲಿ ಬಾಡಿಗೆಗೆ ಇದ್ದ ಶಿವು(28) ಎನ್ನುವಾತ ಹತ್ಯೆಗೈದಿದ್ದಾನೆ. ಸೆ.21ರಂದು ಮನೆಯ ಮಾಲಕಿ ಶೋಭಾ ರಾಯಚೂರಿಗೆ ಬಂದಿದ್ದು, ಬಾಡಿಗೆ ನೀಡಿದ್ದ ಮನೆಯಲ್ಲಿ ತಂಗಿದ್ದರು.

ಅಂದು ಬಾಡಿಗೆದಾರ ಶಿವು ಶೋಭಾ ಇದ್ದ ಮನೆಗೆ ಬಂದು ಮುಖ ಮತ್ತು ಬಾಯಿಗೆ ಬಟ್ಟೆ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಂದಿದ್ದಾನೆ. ಶೋಭಾ ಸಂಬಂಧಿಕರು ಸಹಜ ಸಾವು ಎಂದು ತಿಳಿದು ಅಂತ್ಯ ಸಂಸ್ಕಾರ ಮಾಡಿದ್ದಾರೆ.

ನಂತರ ಶೋಭಾ ಮೈಮೇಲಿದ್ದ ಚಿನ್ನಾಭರಣ ಮತ್ತು ಮೊಬೈಲ್ ಇರದಿದ್ದನ್ನು ಗಮನಿಸಿ ಅನುಮಾನದಿಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಶ್ಚಿಮ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಎಂ.ಪುಟ್ಟ ಮಾದಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net