ಕೃಷಿ ಇಲಾಖೆಯ ಅಧಿಕಾರಿ ದೀಪಾ ಎಲ್ ಮಾತನಾಡಿ, ತಾಲೂಕಿನ ಯೂರಿಯಾ ರಸಗೊಬ್ಬರದ ಮುಂಗಾರು ಬೇಡಿಕೆ 16,592 ಮೆಟ್ರಿಕ್ ಟನ ಇರುತ್ತದೆ. ಅದರಲ್ಲಿ ಆಗಸ್ಟ್ ಅಂತ್ಯದವರೆಗೆ 13,430 ಮೆಟ್ರಿಕ್ ಟನ್ ರಷ್ಟು ಬೇಡಿಕೆ ಇದ್ದು, ಈ ಪೈಕಿ ಇದುವರೆಗೆ 12,484 ರಷ್ಟು ಗೊಬ್ಬರ ವಿವಿಧ ಮಳಿಗೆಗಳಿಂದ ಮಾರಾಟವಾಗಿದ್ದು, 1994 ಮೆಟ್ರಿಕ್ ಟನ್ ದಷ್ಟು ದಾಸ್ತಾನು ಇರುತ್ತದೆ. ರಾಯಚೂರ ತಾಲೂಕಿನಲ್ಲಿ ಸಕ್ರಿಯವಾಗಿ ರಸಗೊಬ್ಬರ ವಿತರಣೆಯಲ್ಲಿ ತೊಡಗಿರುವ ಎಲ್ಲ ಸಹಕಾರಿ ಸಂಘಗಳಿಗೆ ಜಿಲ್ಲೆಯಿಂದ ಬಪ್ಪರ್ ಸ್ಟಾಕ್ ವಿತರಣೆಯಾಗುತ್ತಿದ್ದು, ಅದರಲ್ಲಿ ಈವರೆಗೆ ಒಟ್ಟು 1737 ಮೆಟ್ರಿಕ್ ಟನ್ ರಷ್ಟು ಯೂರಿಯಾ ಹಾಗೂ 809 ಮೆಟ್ರಿಕ್ ಟನ್ ರಷ್ಟು ಡಿಎಪಿ ರಸಗೊಬ್ಬರವನ್ನು ಹಂಚಿಕೆ ಮಾಡಲಾಗಿದೆ ಸಭೆಗೆ ಮಾಹಿತಿ ನೀಡಿದರು.