

ರಾಯಚೂರು: ತಾಲೂಕಿನ ದೇವಸುಗೂರು ಗ್ರಾಮದ ಸೂಗುರೇಶ್ವರ ಜಾತ್ರಾ ಮಹೋತ್ಸವವು ಡಿ.1ರಿಂದ 10ರವರೆಗೆ ಜರುಗಲಿದ್ದು, ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ತಾಲೂಕಿನ ದೇವಸಗೂರಿನ ಸೂಗುರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ನ.23ರಂದು ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಪ್ರತಿವರ್ಷವೂ ದೇವಸುಗೂರು ಜಾತ್ರೆಯನ್ನು ಅತಿ ವಿಜೃಂಭಣೆಯಿಂದ ಜರುಗಿಸಲಾಗುತ್ತದೆ. ಈ ಬಾರಿಯೂ ಡಿ.7ರಂದು ಸೂಗುರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವವು ಅದ್ದೂರಿಯಾಗಿ ನಡೆಯಲಿದೆ ಎಂದರು.
ಹಲವು ರಾಜ್ಯಗಳಿಂದ ಭಕ್ತರು ಜಾತ್ರೆಗೆ ಆಗಮಿಸಲಿದ್ದಾರೆ. ದೇವಸ್ಥಾನದ ಹತ್ತಿರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಯಾವುದೇ ಅಹಿತಕರ ಘಟನೆಗಳಾಗದಂತೆ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಸಂದೋಬಸ್ತ್ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಎಸಿ ಗಜಾನನ ಬಾಲೆ, ತಹಸೀಲ್ದಾರ್ ಸುರೇಶ ವರ್ಮಾ, ಗ್ರಾ.ಪಂ ಅಧ್ಯಕ್ಷೆ ಮೀನಾಕ್ಷಿ, ಊರಿನ ಪ್ರಮುಖರಾದ ಮಲ್ಲಿಕಾರ್ಜುನ ಧಣಿ, ಶಾಂತಪ್ಪ, ಶ್ರೀನಿವಾಸ, ಹಂಪನಗೌಡ, ಬಸವರಾಜ, ಬಷೀರ್, ಶಂಕರ ಪಾಟೀಲ್, ವೀರನಗೌಡ, ಟಿ.ಸೂಗಪ್ಪ, ಕೃಷ್ಣ, ನರಸಪ್ಪ, ಲಕ್ಷ್ಮಣ, ರಾಧಕೃಷ್ಣ ಸೇರಿದಂತೆ ಇತರರಿದ್ದರು.