ಹುಬ್ಬಳ್ಳಿಯಲ್ಲಿ ರಾಯಚೂರು ವಿದ್ಯಾಥಿ೯ಗಳ ರಕ್ಷಣೆ

Town PS
Published on

ಹುಬ್ಬಳ್ಳಿ: ರಾಯಚೂರು ನಗರದಿಂದ ನಾಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತ ಯುವತಿಯರು ಸೇರಿದಂತೆ ನಾಲ್ವರು ವಿದ್ಯಾಥಿ೯ಗಳನ್ನು ಆರ್​ಪಿಎಫ್​ (ರೈಲ್ವೆ ರಕ್ಷಣಾ ದಳ) ಹಾಗೂ ಹುಬ್ಬಳ್ಳಿ ಪೊಲೀಸರು ಸೋಮವಾರ ರಕ್ಷಿಸಿದ್ದಾರೆ.
ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಯಚೂರು ನಗರದ 17 ವರ್ಷ ವಯಸ್ಸಿನ ನಾಲ್ವರು ಯುವತಿಯರು ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ರೈಲಿನ ಮೂಲಕ ಗೆಳತಿಯರು ಹುಬ್ಬಳ್ಳಿಗೆ ಬಂದಿದ್ದರು. ನಿಲ್ದಾಣದಲ್ಲಿ ಓಡಾಡುತ್ತಿದ್ದ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರನ್ನು ನೋಡಿದ ಆರ್​ಪಿಎಫ್​ ಸಿಬ್ಬಂದಿ, ಸಂಶಯಗೊಂಡು ವಿಚಾರಿಸಿದ್ದಾರೆ. ಈ ವೇಳೆ ರಾಯಚೂರಿನಿಂದ ತಪ್ಪಿಸಿಕೊಂಡು ಬಂದಿರುವ ವಿಷಯ ತಿಳಿದಿದೆ. ಕೂಡಲೇ ಸ್ಥಳಿಯ ಪೊಲೀಸರಿಗೆ ಮಾಹಿತಿ ರವಾನಿಸಿದರು.
ಸ್ಥಳಕ್ಕೆ ಆಗಮಿಸಿದ ಶಹರ ಠಾಣೆ ಇನ್ಸ್​ಪೆಕ್ಟರ್​ ಆನಂದ ಒನಕುದ್ರೆ ನೇತೃತ್ವದ ತಂಡ ವಿದ್ಯಾಥಿರ್ಗಳನ್ನು ರಕ್ಷಿಸಿ, ಠಾಣೆಗೆ ಕರೆದೊಯ್ದರು. ಈ ಬಗ್ಗೆ ರಾಯಚೂರು ಮಹಿಳಾ ಪೊಲೀಸರಿಗೆ ಮಾಹಿತಿ ರವಾನಿಸಿದರು. ರಾತ್ರಿ ನಗರಕ್ಕೆ ಆಗಮಿಸಿದ ರಾಯಚೂರು ಪೊಲೀಸರು ವಿದ್ಯಾಥಿ೯ಗಳನ್ನು ವಾಪಸ್​ ಕರೆದೊಯ್ದರು.

ಬೆಂಗಳೂರಿನತ್ತ ಪಯಣ ?
ಯಾವುದೋ ವಿಚಾರಕ್ಕೆ ಬೇಸರಗೊಂಡು ರೈಲು ಹತ್ತಿಕೊಂಡು ಹುಬ್ಬಳ್ಳಿಗೆ ಬಂದಿದ್ದಾಗಿ ಮತ್ತು ಇಬ್ಬರು ಈಗಾಗಲೇ ವಾಪಸ್​ ರಾಯಚೂರಿಗೆ ಮರಳಿದ್ದಾರೆ ಎಂದು ರಕ್ಷಿಸಲ್ಪಟ್ಟ ಯುವತಿಯರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಇವರು ಬೆಂಗಳೂರಿಗೆ ತೆರಳಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net