ವಿದ್ಯಾರ್ಥಿಗಳು ಇತಿಹಾಸವನ್ನು ಅರಿತುಕೊಳ್ಳಿ: ಶ್ರೀನಿವಾಸ ಗಟ್ಟು

IMG-20241125-WA0024
Published on

ರಾಯಚೂರು: ಜಿಲ್ಲೆಯು ಕೋಟೆಗಳಿಂದ ಹೆಸರುವಾಸಿಯಾಗಿದ್ದು, ಕೋಟೆ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ಶ್ರೀನಿವಾಸ ಗಟ್ಟು ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಯಚೂರು ಕೋಟೆಯ 730ನೇ ದಿನಾಚರಣೆ ಅಂಗವಾಗಿ ಸಾಹಿತಿ ವೀರಹನುಮಾನ ಅವರ ‘ನಮ್ಮ ಎಡೆದೊರೆ ನಾಡು’ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನುದ್ದೇಶಿಸಿ ಸೋಮವಾರ ಮಾತನಾಡಿದರು.

ಜಿಲ್ಲೆಯ ಐತಿಹಾಸಿಕತೆಯನ್ನು ಅನಾವರಣಗೊಳಿಸುವ ಕೆಲಸವಾಗಬೇಕಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ರಾಯಚೂರಿನ ಇತಿಹಾಸವನ್ನು ಅರಿತುಕೊಳ್ಳುವುದು ಬಹುಮುಖ್ಯವಾಗಿದೆ ಎಂದರು.

ಪುಸ್ತಕಗಳನ್ನು ಓದುವುದರಿಂದ ವರ್ತಮಾನದಲ್ಲಿ ನಿಂತು ಇತಿಹಾಸವನ್ನು ನೋಡಿದ ಅನುಭವ ಸಿಗುತ್ತದೆ. ‘ನಮ್ಮ ಎಡೆದೊರೆ ನಾಡು’ ಪುಸ್ತಕದ ಮೂಲಕ ಜಿಲ್ಲೆಯ ಹಿಂದಿನ ವೈಭವವನ್ನು ಸ್ಮರಿಸಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಗೋಪಾಲ ಜೂಕೂರು, ಸಾಹಿತಿಗಳಾದ ನರಸಪ್ಪ ಭಂಡಾರಿ, ಅಯ್ಯಪ್ಪಯ್ಯ ಹುಡಾ, ಕಲಾವಿದರಾದ ವಿ.ಎನ್.ಅಕ್ಕಿ, ಎಚ್.ಎಚ್.ಮ್ಯಾದಾರ್, ಪ್ರಮುಖರಾದ ಆಂಜನೇಯ್ಯ ಜಾಲಿಬೆಂಚಿ, ರಸೂಲ್ ಸಾಬ್, ಮಹಾದೇವ, ಬಸವರಾಜ, ಗೌಸ್ ಪೀರ್ ಜಾದೆ, ಬಷೀರ್ ಅಹ್ಮದ್ ಹೊಸಮನಿ, ಶ್ರೀನಿವಾಸ, ಅಮರೇಶ, ಈರಣ್ಣ ಬೆಂಗಾಲಿ, ಸೈಯದ್ ಹಫೀಜುಲ್ಲಾ, ಪ್ರಕಾಶಕ ಮಲ್ಕಪ್ಪ. ಕೃತಿಕಾರ ವೀರಹನುಮಾನ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net