ರಾಯಚೂರಿನಲ್ಲಿ ರಸ್ತೆಯಲ್ಲಿ ಬಿದ್ದ 500 ನೋಟುಗಳು, ಜನತೆಗೆ ಆತಂಕ

250420 Raichur Corona Notes on Road
Published on

ರಾಯಚೂರು: ನಗರದ ನೇತಾಜಿನಗರ ಬಡಾವಣೆಯಲ್ಲಿನ ಮನೆ ಮುಂದಿನ ರಸ್ತೆಯಲ್ಲಿ ಶನಿವಾರ 500 ಮುಖಬೆಲೆಯ ಐದು ನೋಟುಗಳು ಬಿದ್ದಿದ್ದು, ಬಡಾವಣೆ ಜನರಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿತ್ತು. ನೋಟುಗಳನ್ನು ನೋಡಿದ ಜನ ಅವುಗಳನ್ನು ಮುಟ್ಟದೆ, ಗಾಳಿಗೆ ಹಾರಿ ಹೋಗದಂತೆ ಅವುಗಳ ಮೇಲೆ ಕಲ್ಲುಗಳನ್ನಿಟ್ಟು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಜನರು ನೋಟುಗಳನ್ನು ನೋಡಲು ಮುಗಿಬಿದ್ದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆಯಲ್ಲಿ ಬಿದ್ದಿದ್ದ 500 ರೂ. ಮುಖಬೆಲೆ ನಾಲ್ಕು ನೋಟುಗಳು ಹಾಗೂ ಚರಂಡಿಯಲ್ಲಿ ಬಿದ್ದಿದ್ದ ಒಂದು ನೋಟನ್ನು ಸಂಗ್ರಹಿಸಿ ತಪಾಸಣೆಗೆ ಕಳಿಸಿದ್ದಾರೆ. ಕರೊನಾ ಸೋಂಕು ಹರಡಲು ಅನಾಮಧೇಯರು ಈ ಕೃತ್ಯ ಎಸಗಿದ್ದಾರೆ ಎಂಬ ಆತಂಕ ಸ್ಥಳದಲ್ಲಿ ಸೃಷ್ಟಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net