ಬಂಧನಕ್ಕೆ ನಾವು ಹೆದರೊಲ್ಲ

25092022 raichur mohamd Nalapad_harris
Published on

ರಾಯಚೂರು: ಪೇಸಿಎಂ ಪೋಸ್ಟರ್ ಅಂಟಿಸಿದ ಪಕ್ಷದ ಕಾರ್ಯಕರ್ತರನ್ನು ಸರ್ಕಾರ ಬಂಧಿಸುತ್ತಿದೆ. ಅದಕ್ಕೆ ನಾವು ಹೆದರೊಲ್ಲ. ಪೋಸ್ಟರ್ ಅಭಿಯಾನ ಮುಂದುವರಿಸುತ್ತೇವೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದ್ ಹ್ಯಾರಿಸ್ ನಲಪಾಡ್ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಪರ್ಸಂಟೇಜ್ ವಿಚಾರ ನಾವು ಹೇಳಿದ್ದಲ್ಲ. ಪರ್ಸಂಟೇಜ್‌ಗೆ ಬೇಸತ್ತು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಹೇಳಿದ್ದಾರೆ. ಪರ್ಸಂಟೇಜ್‌ಗೆ ಬೇಸತ್ತು ಸಂತೋಷ ಜೀವ ಕಳೆದುಕೊಂಡಿದ್ದಾನೆ ಎಂದರು.

ಲಿಂಗಾಯತರು ಸಿಎಂ ಆಗಿದ್ದಕ್ಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಸಮಾಜ ಎನ್ನುವುದು ಇರುವುದಿಲ್ಲ. ಮೃತ ಗುತ್ತಿಗೆದಾರ ಸಂತೋಷ ಯಾವ ಸಮಾಜಕ್ಕೆ ಸೇರಿದ್ದಾರೆ. ಆತ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಸಮಾಜದ ಹೆಸರಿನಲ್ಲಿ ಭ್ರಷ್ಟಾಚಾರ ಮುಚ್ಚಿ ಹಾಕಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ಭಯೋತ್ಪಾದನೆಗೆ ನಿರುದ್ಯೋಗ ಕಾರಣ ಎಂದು ನಾನು ಹೇಳಿಲ್ಲ. ಕೆಲಸ ಇಲ್ಲದೆ ಇರುವುದಕ್ಕೆ ಯುವಕರು ದಾರಿ ತಪ್ಪುತ್ತಿದ್ದಾರೆಂದು ಹೇಳಿರುವುದನ್ನು ತಿರುಚಲಾಗಿದೆ. ರಾಜ್ಯದಲ್ಲಿ ಬಜರಂಗದಳ, ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್ ಮಾಡಲಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net