114 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಾಳೆ

27032022 raichur ddpi
Published on

ರಾಯಚೂರು: ಜಿಲ್ಲೆಯಲ್ಲಿ 114 ಕೇಂದ್ರಗಳಲ್ಲಿ ಮಾ.28ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, 31,896 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ರಾಯಚೂರು ತಾಲೂಕಿನಲ್ಲಿ 34, ದೇವದುರ್ಗ 16, ಲಿಂಗಸುಗೂರು 27, ಮಾನ್ವಿ 18, ಸಿಂಧನೂರು ತಾಲೂಕಿನಲ್ಲಿ 19 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೇಂದ್ರಗಳಲ್ಲಿನ ಕೊಠಡಿಗಳನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ. ಪರೀಕ್ಷೆಗೆ 16,725 ಬಾಲಕರು, 15,171 ಬಾಲಕಿಯರು ಒಟ್ಟು 31,896 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ರಾಯಚೂರು ತಾಲೂಕಿನಲ್ಲಿ 9,051, ದೇವದುರ್ಗದಲ್ಲಿ 4,310, ಲಿಂಗಸುಗೂರಿನಲ್ಲಿ 6,442, ಮಾನ್ವಿಯಲ್ಲಿ 6,038 ಹಾಗೂ ಸಿಂಧನೂರಿನಲ್ಲಿ 6,055 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net