ಶ್ರೀಶೈಲ ಯಾತ್ರಾರ್ಥಿಗಳಿಗೆ ಅನ್ನ ದಾಸೋಹ

23-03-Shiva-1
Published on

ರಾಯಚೂರು: ನಗರದ ಗಣೇಶ ಕಾಲನಿಯ ಈಶ್ವರ ದೇವಸ್ಥಾನ ಸೇವಾ ಸಮಿತಿಯಿಂದ ಯುಗಾದಿ ನಿಮಿತ್ತ ಶ್ರೀಶೈಲಕ್ಕೆ ಹೋಗಿ ತಮ್ಮ ಗ್ರಾಮಗಳಿಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗಾಗಿ ನಗರದ ಹೊರವಲಯದ ಮುಗಳಖೋಡ ಮುಕ್ತಿಮಂದಿರದಲ್ಲಿ ಗುರುವಾರ ಅನ್ನ ದಾಸೋಹ ಏರ್ಪಡಿಸಲಾಗಿತ್ತು.

ಬೆಳಗ್ಗೆ 6ರಿಂದ ಆರಂಭವಾದ ಅನ್ನ ದಾಸೋಹಕ್ಕೆ ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ವಿಜಯಪುರ, ಬಾಗಲಕೋಟೆ, ಸೊಲ್ಲಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವಾಪಸ್ ಆಗುತ್ತಿದ್ದ ಸಾವಿರಾರು ಯಾತ್ರಾರ್ಥಿಗಳಿಗೆ ಭೋಜನದ ವ್ಯವಸ್ಥೆ ಜತೆಗೆ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಒದಗಿಸಲಾಯಿತು.

ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ ಎನ್.ಎಸ್.ಬೋಸರಾಜು, ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ನಗರಸಭೆ ಸದಸ್ಯ ಶರಣಬಸವ ಬಲ್ಲಟಗಿ, ಪದಾಧಿಕಾರಿಗಳಾದ ಗಿರಿಮಲ್ಲಪ್ಪ, ಶಿವಯೋಗಿ ಪಾಟೀಲ್, ವಿಜಯಕುಮಾರ ಸಜ್ಜನ್, ಪ್ರಭು ಶಾಸ್ತ್ರಿ, ಬಸವರಾಜ ಯಾಪಲದಿನ್ನಿ, ಕಲ್ಲಯ್ಯಸ್ವಾಮಿ, ಪರಮೇಶ್ವರ ಸಾಲಿಮಠ, ಶರಣಬಸವ ಹಿರೇಮಠ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net