ಭಕ್ತಿ, ಶ್ರದ್ಧೆಯಿಂದ ರಾಮ ನವಮಿ ಆಚರಣೆ

30-03-Shiva-3
Published on

ರಾಯಚೂರು: ಶ್ರೀರಾಮ ನವಮಿ ಆಚರಣೆ ನಿಮಿತ್ತ ನಗರದ ಶ್ರೀರಾಮ ಮಂದಿರಗಳಲ್ಲಿ ಗುರುವಾರ ರಾಮದೇವರಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರದ ಸ್ಟೇಷನ್ ರಸ್ತೆಯ ಶ್ರೀರಾಮ ಮಂದಿರ, ನಿಜಲಿಂಗಪ್ಪ ಕಾಲನಿಯ ಕೋದಂಡರಾಮ ಮಂದಿರ, ನೇತಾಜಿ ನಗರದ ಕೋದಂಡರಾಮ ದೇವಸ್ಥಾನ, ನಗರೇಶ್ವರ ದೇವಸ್ಥಾನ, ವೈಕುಂಠ ಹನುಮಾನ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ರಾಮ ದೇವರಿಗೆ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದ್ದು, ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net