ಆ.10ರಿಂದ ರಾಯರ ಆರಾಧನೆ

15032020 Mantralaya Muth coronavirus
Published on

ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಆ.10 ರಿಂದ 16ರ ವರೆಗೆ ಶ್ರೀ ರಾಘವೇಂದ್ರಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ನಡೆಯಲಿದೆ.

ಆ.12ರಂದು ಪೂರ್ವಾರಾಧನೆ, ಆ.13ರಂದು ಮಧ್ಯಾರಾಧನೆ ಮತ್ತು ಆ.14ರಂದು ಉತ್ತರಾರಾಧನೆ ಜರುಗಲಿದೆ. ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಏಳು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆ.10ರಂದು ಧ್ವಜಾರೋಹಣ ನೆರವೇರಿಸುವ ಮೂಲಕ ಆರಾಧನಾ ಮಹೋತ್ಸವಕ್ಕೆ ಶ್ರೀಗಳು ಚಾಲನೆ ನೀಡಲಿದ್ದಾರೆ. ಆ.11ರಂದು ರಜತ ಮಂಟಪೋತ್ಸವ ಜರುಗಲಿದೆ.

ಆ.12ರಂದು ಪೂರ್ವಾರಾಧನೆ ನಿಮಿತ್ತ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಹಾಗೂ ರಜತ ಸಿಂಹ ವಾಹನೋತ್ಸವ ನೆರವೇರಲಿದೆ. ಆ.13ರ ಮಧ್ಯಾರಾಧನೆಯಲ್ಲಿ ಗಜ, ರಜತ ಮತ್ತು ಸ್ವರ್ಣ ರಥೋತ್ಸವ ಇರಲಿದೆ. ಆ.14ರ ಉತ್ತರಾರಾಧನೆ ನಿಮಿತ್ತ ಮಹಾರಥೋತ್ಸವ ಜರುಗಲಿದೆ. ಏಳು ದಿನಗಳ ಕಾಲ ಪ್ರತಿದಿನ ಬೆಳಗ್ಗೆ 10ಕ್ಕೆ ಜ್ಞಾನ ಯಜ್ಞ, ಸಂಜೆ 5.30ರಿಂದ ರಾತ್ರಿ 10ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net