ಶ್ರೇಯಸ್ ಜೋಷಿಯಿಂದ ನೃತ್ಯ ಸಮರ್ಪಣೆ

Ramesh Joshi
ರಮೇಶ ಜೋಷಿ, ಅಧ್ಯಕ್ಷ, ರಾಘವ ನಾಟ್ಯಾಮೃತ ಕಲಾನಿಕೇತನ.
Published on

ರಾಯಚೂರು: ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನ.27ರಂದು ನೃತ್ಯ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶ್ರೇಯಸ್ ಜೋಷಿ ಮತ್ತು ತಂಡದಿಂದ ಭರತನಾಟ್ಯ ಮತ್ತು ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕ ಪ್ರದರ್ಶನ ನಡೆಯಲಿದೆ ಎಂದು ರಾಘವ ನಾಟ್ಯಾಮೃತ ಕಲಾನಿಕೇತನದ ಅಧ್ಯಕ್ಷ ರಮೇಶ ಜೋಷಿ ತಿಳಿಸಿದರು.

ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಸುಗ್ಗನಹಳ್ಳಿ ಷಡಕ್ಷರಿ ಸಾಹಿತ್ಯ, ಚಿದಂಬರ ಜೋಷಿ ಸಂಗೀತ, ಶ್ರೇಯಸ್ ಜೋಷಿ ನೃತ್ಯ ಸಂಯೋಜನೆ, ವರದೇಂದ್ರ ಗಂಗಾಖೇಡ, ಪ್ರಭಾ ಕಂಬಾರ್ ಹಾಡುಗಾರಿಕೆಯೊಂದಿಗೆ ನೃತ್ಯ ಪ್ರದರ್ಶನ ನಡೆಯಲಿದೆ.

ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದು, ನಗರಸಭೆ ಸದಸ್ಯ ಜಯಣ್ಣ, ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಸ್ಮೀತಾ ಅಕ್ಕ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ರಮೇಶ ಜೋಷಿ ತಿಳಿಸಿದರು. ಸಂಸ್ಥೆ ಪದಾಧಿಕರಿಗಳಾದ ಎಂ.ಸುರೇಶ, ಶ್ರೇಯಸ್ ಜೋಷಿ, ವಿಷ್ಣುಕಾಂತ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net