ರಾಯಚೂರು ಜಿಲ್ಲೆಯಾದ್ಯಂತ ಪರಮೇಶ್ವರನ ನಾಮಸ್ಮರಣೆ

180223 Raichur Shivaratri 2023
ರಾಯಚೂರಿನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಶನಿವಾರ ದರ್ಶನಕ್ಕಾಗಿ ಸಾಲು ನಿಂತಿದ್ದ ಜನರು.
Published on

ರಾಯಚೂರು: ಜಿಲ್ಲೆಯಾದ್ಯಂತ ಮಹಾಶಿವರಾತ್ರಿಯನ್ನು ಶ್ರದ್ಧೆ-ಭಕ್ತಿಯಿಂದ ಶನಿವಾರ ಆಚರಿಸಲಾಯಿತು. ಈಶ್ವರ ದೇವಸ್ಥಾನಗಳಲ್ಲಿ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿಸುವ ಮೂಲಕ ಜನರು ಶಿವನಿಗೆ ಭಕ್ತಿ ಸಮರ್ಪಣೆ ಮಾಡಿದರು.

ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆರಂಭವಾದವು. ಜನರು ಕುಟುಂಬಸ್ಥರೊಂದಿಗೆ ದೇವಸ್ಥಾನಗಳ ಮುಂದೆ ದರ್ಶನಕ್ಕಾಗಿ ಸಾಲುಗಟ್ಟಿರುವುದು ಕಂಡುಬಂತು. ದೇವಸ್ಥಾನಗಳಲ್ಲಿ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ನಗರದ ಚಂದ್ರಮೌಳೇಶ್ವರ ದೇವಸ್ಥಾನ, ನಂದೀಶ್ವರ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ಡ್ಯಾಡಿ ಕಾಲನಿಯ ಈಶ್ವರ ದೇವಸ್ಥಾನ, ರಾಮಲಿಂಗೇಶ್ವರ ದೇವಸ್ಥಾನಗಳಲ್ಲಿ ದರ್ಶನಕ್ಕಾಗಿ ಹೆಚ್ಚಿನ ಜನರು ಸಾಲುಗಟ್ಟಿ ನಿಂತಿದ್ದರು. ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳ ಮೂಲಕ ಶಿವ ಜಪ ಕೇಳಿ ಬಂತು.

ಶಿವರಾತ್ರಿ ನಿಮಿತ್ತ ಬಹುತೇಕರು ಉಪವಾಸ ವ್ರತ ಕೈಗೊಳ್ಳುವುದರೊಂದಿಗೆ ಮನೆಯಲ್ಲಿ ನಂತರ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಉಪಹಾರ ಸೇವಿಸುವ ಮೂಲಕ ವೃತ ಪೂರ್ಣಗೊಳಿಸಿದರು. ಸಂಜೆ ಹಲವು ದೇವಸ್ಥಾನಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net