ಸೇವಾ ಕಾರ್ಯದಿಂದ ಪುಣ್ಯ ಪ್ರಾಪ್ತಿ

210722 Raichur Kashishree Ista linga Pooja concluded
ರಾಯಚೂರಿನಲ್ಲಿ ಗುರುವಾರ ಆಯೋಜಿಸಿದ್ದ ಇಷ್ಟಲಿಂಗ ಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ರಾಯಚೂರು: ನಮ್ಮ ಮನಸು ಶುದ್ಧವಾಗಿದ್ದರೆ ಇಷ್ಟಲಿಂಗಕ್ಕೆ ಅಭಿಷೇಕ ಮಾಡುವ ಮನೆಯಲ್ಲಿ ನೀರು ಕೂಡ ಪವಿತ್ರ ಗಂಗೆಯಾಗುತ್ತದೆ. ಮಾಡುವ ಕೆಲಸದಲ್ಲಿ ಭಕ್ತಿ, ಶ್ರದ್ಧೆ ಇದ್ದರೆ ಕೆಲಸಕ್ಕೆ ಪಾವಿತ್ರೃ ದೊರೆಯುತ್ತದೆ ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಇಷ್ಟಲಿಂಗ ಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಗುರುವಾರ ಆಶೀರ್ವಚನ ನೀಡಿ, ಮನಸು ಶುದ್ಧವಾಗಿಟ್ಟುಕೊಂಡು ಇಷ್ಟಲಿಂಗ ಪೂಜೆ ಮಾಡಿದಾಗ ದೇವರು ಪ್ರಸನ್ನನಾಗುತ್ತಾನೆ ಎಂದರು.

ಧಾರ್ಮಿಕ ಕಾರ್ಯಗಳಿಂದ ಮನಸು ಶುದ್ಧವಾಗುತ್ತಿದ್ದು, ನಾವು ದುಡಿದಿದ್ದರಲ್ಲಿ ಅಲ್ಪವನ್ನು ದೇವರು ಹಾಗೂ ಇತರರ ಸೇವೆಗೆ ಮೀಸಲಿಡಬೇಕು. ನಾವು ನೀಡಿದ್ದಕ್ಕಿಂತ ದೇವರು ಸಾವಿರ ಪಟ್ಟು ನಮಗೆ ನೀಡುತ್ತಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯೋಗ ಸಾಧನೆಯಿಂದ ದೊರೆಯುವಂತಹ ಪುಣ್ಯಕ್ಕಿಂತ ಸೇವಾ ಕಾರ್ಯ ಮಾಡಿದಾಗ ಹೆಚ್ಚಿನ ಪುಣ್ಯ ಸಿಗುತ್ತದೆ. ಕಾರ್ಯಕ್ರಮದಲ್ಲಿ ಹಲವರು ಹಲವು ರೀತಿಯ ಸೇವೆಗಳನ್ನು ಮಾಡಿದ್ದು, ಅವರಿಗೆ ಅದಕ್ಕೆ ತಕ್ಕ ಪುಣ್ಯಫಲ ಪ್ರಾಪ್ತಿಯಾಗುತ್ತದೆ ಎಂದು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net