ಆಧುನಿಕ ವಚನಕಾರರಿಂದ ಉತ್ತಮ ರಚನೆ; ಸಾಹಿತಿ ರಮೇಶಬಾಬು ಅನಿಸಿಕೆ ಕೃತಿ ಬಿಡುಗಡೆ

18122022 raichur book release
Published on

ರಾಯಚೂರು: ಶರಣರ ವಚನಗಳು ಮನಸಿನ ಮೇಲೆ ಅಗಾಧ ಪ್ರಭಾವ ಬೀರುತ್ತವೆ. ವಚನಗಳು ಶರಣರ ಮನದಾಳದಿಂದ ಬಂದ ಮಾತುಗಳಾಗಿವೆ ಎಂದು ಹಿರಿಯ ಸಾಹಿತಿ ಡಾ.ರಮೇಶ ಬಾಬು ಯಾಳಗಿ ಹೇಳಿದರು.

ಸ್ಥಳೀಯ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಏರ್ಪಡಿಸಿದ್ದ ವೇಣು ಜಾಲಿಬೆಂಚಿಯ ಪರಮೇಶನ ನೂರೊಂದು ವಚನ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. 12ನೇ ಶತಮಾನದ ಶರಣರ ವಚನಗಳಿಗೆ ಸರಿಸಾಟಿಯಾಗದಿದ್ದರೂ ಆಧುನಿಕ ವಚನಕಾರರು ಉತ್ತಮ ವಚನಗಳ ರಚನೆಯಲ್ಲಿ ತೊಡಗಿದ್ದಾರೆ ಎಂದರು.

ವಚನ ಸಾಹಿತ್ಯವನ್ನು ಅರಿತುಕೊಂಡರೆ ಸರಿದಾರಿಯಲ್ಲಿ ನಡೆಯಲು ಸಾಧ್ಯ. ಆಗ ದೇಶವೂ ಸರಿದಾರಿಯಲ್ಲಿ ಸಾಗುತ್ತದೆ ಎಂದು ಡಾ.ರಮೇಶ ಬಾಬು ಯಾಳಗಿ ಹೇಳಿದರು. ದೇವದುರ್ಗ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಬಸವರಾಜ ಬ್ಯಾಗವಾಟ ಮಾತನಾಡಿ, ಕೃತಿಯಲ್ಲಿನ ವಚನಗಳು ಸತ್ತ್ವಯುತವಾಗಿದ್ದು, ಸಮಾಜದಲ್ಲಿನ ಅಂಕುಡೊಂಕುಗಳನ್ನು ವಚನದ ಮೂಲಕ ತಿಳಿ ಹೇಳುವ ಕೆಲಸನವನ್ನು ಕೃತಿ ರಚನೆಕಾರರು ಮಾಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net