ಪ್ರತ್ಯೇಕ ಮನೆಗಳ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ: ಅಪಾರ ಪ್ರಮಾಣದ ಸೇಂಧಿ ಜಪ್ತಿ

raichur excise dept ride
{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}
Published on

ರಾಯಚೂರು: ಅಕ್ರಮವಾಗಿ ಸೇಂಧಿ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಎರಡು ಸ್ಥಳಗಳಲ್ಲಿ ಮನೆಗಳ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಸೇಂಧಿ ಹಾಗೂ ಸಿಎಚ್ ಪೌಡರನ್ನು ಜಪ್ತಿ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ಕೊರವರ ಓಣಿಯಲ್ಲಿ ನ.5ರಂದು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸೇಂಧಿ ಜಪ್ತಿ ಪಡಿಸಿಕೊಂಡಿರುವುದು.
ಕೊರವರ ಓಣಿಯಲ್ಲಿ ನ.5ರಂದು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸೇಂಧಿ ಜಪ್ತಿ ಪಡಿಸಿಕೊಂಡಿರುವುದು.

ನ.5ರಂದು ಕೊರವರ ಓಣಿಯ ಗಜ್ಜಿ ವೀರೇಶ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಸೇಂಧಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, 450 ಲೀಟರ್ ಸೇಂಧಿ, 500 ಗ್ರಾಮ ಸಿಎಚ್ ಪೌಡರ್ ಹಾಗೂ 100 ಗ್ರಾಂ ಇತರೆ ರಾಸಾಯನಿಕವನ್ನು ವಶಪಡಿಸಿಕೊಂಡಿದ್ದಾರೆ. ಗಜ್ಜಿ ವೀರೇಶ ಹಾಗೂ ಉರುಕುಂದಮ್ಮ ಎನ್ನುವವರ ಮೇಲೆ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರಿನ ಗದ್ವಾಲ್ ರಸ್ತೆಯ ಮನೆಯ ಮೇಲೆ ನ.6 ರಂದು ದಾಳಿ ನಡೆಸಿ ಜಪ್ತಿಪಡಿಸಿಕೊಂಡ ಸೇಂಧಿ
ರಾಯಚೂರಿನ ಗದ್ವಾಲ್ ರಸ್ತೆಯ ಮನೆಯ ಮೇಲೆ ನ.6 ರಂದು ದಾಳಿ ನಡೆಸಿ ಜಪ್ತಿಪಡಿಸಿಕೊಂಡ ಸೇಂಧಿ

ನ.6ರಂದು ನಗರದ ಗದ್ವಾಲ್ ರಸ್ತೆಯ ಕಾಕಿನಾಡ ಕೆರೆ ನಿವಾಸಿ ವಾಹಿದ್ ಎಂಬಾತನ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು 42 ಲೀಟರ್ ಸೇಂಧಿಯನ್ನು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net