ಸ್ಕೂಟಿ, ಟ್ರಾಕ್ಟರ್ ಡಿಕ್ಕಿ: ಮಹಿಳೆಗೆ ಗಂಭೀರ ಗಾಯ

IMG_20241122_201136
Published on

ರಾಯಚೂರು: ಟ್ರಾಕ್ಟರ್ ಮತ್ತು ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಕೂಟಿ ಓಡಿಸುತ್ತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿ ಶುಕ್ರವಾರ ಜರುಗಿದೆ.

ನಿಸರ್ಗ ಕಾಲನಿ ನಿವಾಸಿ ಪರಿಮಳ(40) ಗಾಯಗೊಂಡ ಮಹಿಳೆ. ಪ್ರಮಾಣ ಕಾಲೇಜು ಕಡೆಯಿಂದ ಮನೆಗೆ ಸ್ಕೂಟಿಯಲ್ಲಿ ಮಹಿಳೆ ಹೊರಟಿದ್ದರು. ಅದೇ ಮಾರ್ಗವಾಗಿ ನಗರದ ಕಡೆಗೆ ಹೊರಟಿದ್ದ ಟ್ರಾಕ್ಟರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆತಕ್ಕೆ ಮಹಿಳೆಯ ಕೈ ನುಜ್ಜಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net