ಸತ್ಯನಾಥ ತೀರ್ಥರ ಆರಾಧನಾ ಮಹೋತ್ಸವ

061222 Aradhana Mahotsava of Satyanath Theertha in Raichur
ರಾಯಚೂರಿನ ಸತ್ಯನಾಥ ಕಾಲನಿಯಲ್ಲಿರುವ ಉತ್ತರಾದಿ ಮಠದಲ್ಲಿ ಸತ್ಯನಾಥ ತೀರ್ಥರ ಆರಾಧನಾ ಮಹೋತ್ಸವ ನಿಮಿತ್ತ ಮಂಗಳವಾರ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು.
Published on

ರಾಯಚೂರು: ನಗರದ ಸತ್ಯನಾಥ ಕಾಲನಿಯಲ್ಲಿರುವ ಉತ್ತರಾದಿ ಮಠದಲ್ಲಿ ಮಂಗಳವಾರ ಸತ್ಯನಾಥ ತೀರ್ಥರ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಆರಾಧನೆ ಮಹೋತ್ಸವ ನಿಮಿತ್ತ ಮುಖ್ಯ ಪ್ರಾಣದೇವರಿಗೆ ಹಾಗೂ ಸತ್ಯನಾಥ ತೀರ್ಥರ ಮೃತ್ತಿಕಾ ಬೃಂದಾವನದಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನಡೆಸಲಾಯಿತು. ನಂತರ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನಿಟ್ಟು ಮೆರವಣಿಗೆ ನಡೆಸಲಾಯಿತು. ದಾವಣಗೆರೆಯ ಪಂ.ವೆಂಕಟಗಿರೀಶ ಆಚಾರ್ಯ ವಿಶೇಷ ಉಪನ್ಯಾಸ ಜರುಗಿತು. ಕಾರ್ಯಕ್ರಮದಲ್ಲಿ ಜಯತೀರ್ಥ ಆಚಾರ್ಯ, ನರಹರಿ ಆಚಾರ್ಯ ಮುತ್ತಗಿ, ನರಸಿಂಹಮೂರ್ತಿ, ಮಠದ ವ್ಯವಸ್ಥಾಪಕ ಮುಕುಂದ ಆಚಾರ್ಯ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net