ಸಂತೋಷ್ ನಿಧನ ತುಂಬಲಾರದ ನಷ್ಟ: ಉಮೇಶ ಕಾಂಬ್ಳೆ

raichur sagar tribute
Published on

ರಾಯಚೂರು: ಪತ್ರಿಕಾ ಛಾಯಾಗ್ರಾಹಕ ಸಂತೋಷ ಸಾಗರ್ ನಿಧನ ಹಿನ್ನೆಲೆ ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋಟರ್ಸ್‌ ಗೀಲ್ಡ್ ವತಿಯಿಂದ ಗುರುವಾರ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಇದೇ ವೇಳೆ ಸದಾರ್ ಬಜಾರ್ ಪೊಲೀಸ್ ಠಾಣೆಯ ಸಿಪಿಐ ಉಮೇಶ ಕಾಂಬ್ಳೆ ಮಾತನಾಡಿ, ಸಂತೋಷ ಸಾಗರ್ ಅತ್ಯಂತ ಸರಳ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ನಿಧನ ಪತ್ರಿಕಾ ರಂಗಕ್ಕೆ ಅಷ್ಟೇ ಅಲ್ಲದೇ ಸಮಾಜದಲ್ಲಿ ತುಂಬಲಾರದ ನಷ್ಟವಾಗಿದೆ. ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ಸಂತೋಷ ಸಾಗರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಲಾಯಿತು. ನಂತರ ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಆರ್.ಗುರುನಾಥ, ಚನ್ನಬಸವಣ್ಣ, ಬಿ.ವೆಂಕಟಸಿಂಗ್, ಕೆ.ಸತ್ಯನಾರಾಯಣ, ಶಿವಮೂರ್ತಿ ಹಿರೆಮಠ, ದತ್ತು ಸರ್ಕಿಲ್, ಪಾಷಾ ಹಟ್ಟಿ, ಸಿದ್ದಯ್ಯ ಸ್ವಾಮಿ, ರಾಮಕೃಷ್ಣ ದಾಸರಿ, ಭಿಮೇಶ ಪೂಜಾರ, ಶಿವಪ್ಪ ಮಡಿವಾಳ, ಧೀರೇಂಧ್ರ ಕುಲಕರ್ಣಿ, ಜಗನ್ನಾಥ ಪೂಜಾರಿ, ದುರುಗೇಶ, ಮಲ್ಲಿಕಾರ್ಜುನ ಸ್ವಾಮಿ, ಅನಿಲ್, ರಾಚಯ್ಯ ಸ್ವಾಮಿ, ಶಿವಕುಮಾರ, ಶ್ರೀನಿವಾಸ, ಪ್ರಸನ್ನಕುಮಾರ, ಮಹಾನಂದ, ಖಾನ್‌ಸಾಬ್ ಮೋಮಿನ್, ಮುತ್ತಣ್ಣ, ವಾರ್ತಾ ಇಲಾಖೆಯ ಪ್ರದಸ ಲಿಂಗರಾಜ್ ನಾರಾಯಣಪೂರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net