

ರಾಯಚೂರು: ಅಲ್ತಾಫ್ ರಂಗಮಿತ್ರ ಬಳಗದಿಂದ ನ.16ಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಐತಿಹಾಸಿಕ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಳದ ಅಧ್ಯಕ್ಷ ಅಲ್ತಾಫ್ ರಂಗಮಿತ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಅಂದು ಸಂಜೆ 6.30ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಐತಿಹಾಸಿ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಕಿತ್ತೂರು ನಾಡಿನ ಸ್ವಾತಂತ್ರೃಕ್ಕಾಗಿ ಹೋರಡಿದ ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ಇಲ್ಲಿ ರಾಯಣ್ಣ ವಿಫಲವಾಗಲು ಕಾರಣವೇನು. ನಾಡಿನ ಜನರೇ ಅಧಿಕಾರ ಮತ್ತು ಹಣದಾಸೆಗಾಗಿ ರಾಯಣ್ಣನನ್ನು ಹಿಡಿದುಕೊಟ್ಟರೇ ಎಂಬ ಅಂಶವನ್ನಾಧರಿಸಿ ನಾಟಕವನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದರು.
ಅಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹಾಗೂ ಸಂಸದ ಜಿ.ಕುಮಾರ ನಾಯಕ ಅವರಿಗೆ ಅಭಿನಂದನಾ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶಿವಾನಂದ, ರಮೇಶ ಜಾಲಿಬೆಂಚಿ, ಈರಣ್ಣ, ಮುತ್ತಣ್ಣ ಸೇರಿದಂತೆ ಇತರರಿದ್ದರು.