ಕೃಷಿ ಕಾರ್ಪೋರೇಟಿಕರಣ ನಿಲ್ಲಿಸುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಪ್ರತಿಕೃತಿ ದಹಿಸಿ ಪ್ರತಿಭಟನೆ

Kisan morcha
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಂಯುಕ್ತ ಕಿಸಾನ್ ಮೋರ್ಚಾದಿಂದ ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟಿಸಲಾಯಿತು. ಚಾಮರಸ ಮಾಲೀಪಾಟೀಲ್, ಕೆಜಿ ವೀರೇಶ್, ಬಸವಲಿಂಗಪ್ಪ, ಅಸ್ಲಂ ಪಾಷಾ, ಮಾರೆಪ್ಪ ಹರವಿ, ಡಿ.ಎಸ್ ಶರಣಬಸವ, ಪ್ರಭಾಕರ್ ಪಾಟೀಲ್, ಬೂದಯ್ಯ ಸ್ವಾಮಿ, ಶ್ರೀನಿವಾಸ್, ಮುದುಕಪ್ಪ, ಆನಂದ, ಗೋವಿಂದ, ಆಂಜನೇಯ್ಯ ಇದ್ದರು.
Published on

ರಾಯಚೂರು: ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆದು. ದೇಶದಲ್ಲಿರುವ ಕಾರ್ಪೋರೇಟ್ ಕಂಪನಿಗಳನ್ನು ತೊಲಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರತಿಕೃತಿ ದಹಿಸಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕೃಷಿ ಕಾರ್ಪೋರೇಟಿಕರಣ ನಿಲ್ಲಿಸಬೇಕು, ರೈತ ವಿರೋಧಿ ಮತ್ತು ವಿದ್ಯುತ್ ಖಾಸಗಿಕರಣ ಮಸೂದೆ ಹಿಂಪಡೆಯಬೇಕು. ಕೃಷಿ ಉತ್ಪಾದನೆ, ವಿಸ್ತರಣೆಯು ಸರ್ಕಾರದ ಅಧೀನದಲ್ಲಿ ಜೋಪಾನ ಮಾಡಬೇಕು ಹೆದ್ದಾರಿಗಳ ನಿರ್ಮಾಣದ ಹೆಸರಿನಲ್ಲಿ ಫಲವತ್ತಾದ ಜಮೀನನ್ನು ಕಬಳಿಸಲಾಗುತ್ತಿದ್ದು ಕೂಡಲೇ ಇದನ್ನು ನಿಲ್ಲಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಚಾಮರಸ ಮಾಲೀಪಾಟೀಲ್, ಕೆಜಿ ವೀರೇಶ್, ಬಸವಲಿಂಗಪ್ಪ, ಅಸ್ಲಂ ಪಾಷಾ, ಮಾರೆಪ್ಪ ಹರವಿ, ಡಿ.ಎಸ್ ಶರಣಬಸವ, ಪ್ರಭಾಕರ್ ಪಾಟೀಲ್, ಬೂದಯ್ಯ ಸ್ವಾಮಿ, ಶ್ರೀನಿವಾಸ್, ಮುದುಕಪ್ಪ, ಆನಂದ, ಗೋವಿಂದ, ಆಂಜನೇಯ್ಯ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net