ರಾಯಚೂರು ಸಾಹಿತ್ಯದ ಗಟ್ಟಿ ನೆಲ: ಸಿದ್ದರಾಮ ಹೊನ್ಕಲ್ ಬಣ್ಣನೆ

IMG_20241109_122921
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;
Published on

ರಾಯಚೂರು: ಸಾಹಿತಿಗಳ ಚಿಂತನೆಗಳು, ಬರಹಗಳು ಸಮಾಜಮುಖಿಯಾಗಿರಬೇಕು. ಜತೆಗೆ ಯುವ ಕವಿಗಳು ಹಿಂದಿನ ಕಾಲದ ಕವಿಗಳ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ದರಾಮ ಹೊನ್ಕಲ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಚ್ಚೇವು ಕನ್ನಡದ ದೀಪ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.

ಜಿಲ್ಲೆಯಲ್ಲಿ ಅಖಂಡವಾದ ಗಜಲ್ಗಳ ಮಹಾಪೂರ ತುಂಬಿದೆ. ಇಲ್ಲಿ ಎಲ್ಲ ಸಾಹಿತ್ಯ ಪ್ರಕಾರಗಳಿದ್ದು, ರಾಯಚೂರು ಜಿಲ್ಲೆ ಕನ್ನಡ ಸಾಹಿತ್ಯದ ಗಟ್ಟಿ ನೆಲವಾಗಿದೆ. ಸಾಹಿತ್ಯ ಮಾತ್ರವಲ್ಲದೇ ಜಾನಪದ ಕಲೆಗಳಿಗೂ ಜಿಲ್ಲೆ ಹೆಸರುವಾಸಿಯಾಗಿದ್ದು, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪಡೆದ ಸಾಧಕರ ಸಾಧನೆ ಪ್ರಶಂಸನೀಯ ಎಂದರು.

ಹಿರಿಯ ಸಾಹಿತಿ ವೆಂಕರಾವ್ ಕುಲಕರ್ಣಿ ಮಾತನಾಡಿ, ಯುವ ಪೀಳಿಗೆ ಪ್ರಾಚೀನ ಇತಿಹಾಸವನ್ನು ಅವಲೋಕನ ಮಾಡುವುದು ಅತ್ಯಂತ ಮುಖ್ಯ. ಇತಿಹಾಸವನ್ನು ಅರಿಯದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ತಾಯಪ್ಪ ಹೊಸೂರು, ಕೋಶಾಧ್ಯಕ್ಷ ಜಿ.ಸುರೇಶ, ಕಸಾಪ ತಾಲೂಕಾಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಹಿರಿಯ ಸಾಹಿತಿ ಆಂಜನೇಯ ಜಾಲಿಬೆಂಚಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎ.ಎನ್ ಸದಾಶಿವಪ್ಪ, ಸೂಲಗಿತ್ತಿ ಮಲ್ಲಮ್ಮ, ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತೆ ಬುರ‌್ರಕಥಾ ಅಯ್ಯಮ್ಮ ಸೇರಿಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net