

ರಾಯಚೂರು: ಸವಿತಾ ಸಮಾಜದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸದಾಶಿವಪ್ಪ ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ವಿಜಯಭಾಸ್ಕರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನ.12ರಂದು ಸಂಜೆ 5 ಗಂಟೆಗೆ ನಗರದ ಶಂಖಚಕ್ರ ದೇವಸ್ಥಾನದಲ್ಲಿ ಅಭಿನಂದನಾ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಜಿಲ್ಲೆಯ ಖ್ಯಾತ ತಬಲಾ ವಾದಕರಾದ ಸದಾಶಿವಪ್ಪ ಅವರ ಕಲೆಯನ್ನುಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಸಂತಸದ ವಿಚಾರವಾಗಿದೆ. ಮುಂದಿನ ಪೀಳೆಗೆಗ ಸದಾಶಿವಪ್ಪ ಅವರ ಸಾಧನೆ ಮತ್ತು ಕಲಾ ಸೇವೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಸಮಾಜದಿಂದ ಅವರಿಗೆ ಅಭಿನಂದನೆಯನ್ನು ಸಲ್ಲಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಡಿ.ಸಿತಾರಿ, ಸಿ.ಎ.ಗೋವಿಂದ, ನರಸಿಂಹಮೂರ್ತಿ, ವೈ.ರವಿಕುಮಾರ ಸೇರಿದಂತೆ ಇತರರಿದ್ದರು.