ರುದ್ರಭೂಮಿಗೆ ಜಮೀನು ಮಂಜೂರು ಮಾಡಿ

20-01-Shiva-2
Published on

ರಾಯಚೂರು: ತಾಲೂಕಿನ ಗಣಮೂರು ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ರುದ್ರಭೂಮಿಯಿಲ್ಲದ ಕಾರಣ ಜನರು ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ರುದ್ರಭೂಮಿಗೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಗ್ರಾಮದಲ್ಲಿನ 16 ಗುಂಟೆ ಸ್ಥಳವನ್ನು ಹಲವು ವರ್ಷಗಳಿಂದ ಶವ ಸಂಸ್ಕಾರಕ್ಕಾಗಿ ಬಳಸಲಾಗುತ್ತಿತ್ತು. ಈ ಜಾಗವನ್ನು ವ್ಯಕ್ತಿಯೊಬ್ಬರು ವಶಕ್ಕೆ ಪಡೆದಿರುವುದರಿಂದ ರುದ್ರಭೂಮಿ ಇಲ್ಲದಂತಾಗಿದೆ. ಸರ್ವೇ ನಂ.5ರಲ್ಲಿರುವ 1.25 ಗುಂಟೆ ಸ್ಥಳ ಕೆರೆಯಲ್ಲಿ ನಡುಗಡ್ಡೆಯಂತಿದೆ. ಅದರಲ್ಲಿ 16 ಗುಂಟೆ ಸ್ಥಳವನ್ನು ಅಂತ್ಯ ಸಂಸ್ಕಾರಕ್ಕೆ ಬಳಸಲಾಗುತ್ತಿತ್ತು. ಈಗ ಶವ ಸಂಸ್ಕಾರಕ್ಕೆ ಅಡ್ಡಿ ಪಡಿಸಲಾಗುತ್ತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net