ಜನಮನ ಸೆಳೆದ ಆರ್‌ಎಸ್‌ಎಸ್ ಪಥಸಂಚಲನ

Rss raichur
Published on

ರಾಯಚೂರು: ರಾಷ್ಟ್ರೀಯ ಸ್ವಯಂಸೇವಕರ ಸಂಘ(ಆರ್‌ಎಸ್‌ಎಸ್) ವತಿಯಿಂದ ವಿಜಯದಶಮಿ ಉತ್ಸವದ ಅಂಗವಾಗಿ ನಗರದಲ್ಲಿ ಸೋಮವಾರ ಆಕರ್ಷಕ ಪಥಸಂಚಲನ ಕಾರ್ಯಕ್ರಮ ಜರುಗಿತು.

ನಗರದ ವೀರಾಂಜನೇಯ್ಯ ಕಲ್ಯಾಣ ಮಂಟಪದ ಆವರಣದಿಂದ ಆರಂಭವಾದ ಪಥಸಂಚಲನ ನಗರದ ಪ್ರಮುಖರ ಬೀದಿಗಳಲ್ಲಿ ಹಾಗೂ ವೃತ್ತಗಳಲ್ಲಿ ಸಂಚಿರಿಸಿ ನೋಡುಗರ ಗಮನ ಸೆಳೆಯಿತು.

ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ಪ್ರಮುಖ ಬೀದಿಗಳಲ್ಲಿ ಕಟ್ಟಿದ್ದ ಭಗವಾ ಧ್ವಜ, ಕೇಸರಿ ತೋರಣಗಳು, ಹಾಗೂ ವೃತ್ತಗಳಲ್ಲಿ ನಿರ್ಮಿಸಲಾಗಿದ್ದ ಕೇಸರಿ ಕಮಾನುಗಳು ಹಾಗೂ ವಿಶೆಷವಾಗಿ ಮನೆಗಳ ಮುಂದೆ ಪಥ ಸಂಚಲನಕ್ಕಾಗಿ ಹಾಕಲಾಗಿದ್ದ ರಂಗೋಲಿಗಳು ಜನರನ್ನು ಮತ್ತಷ್ಟು ಆಕರ್ಷಿಸುತ್ತಿದ್ದವು.

450ಕ್ಕೂ ಹೆಚ್ಚಿನ ಸ್ವಯಂ ಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಸ್ವಯಂ ಸೇವಕರಿಗೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ವರ್ತಕರು ಹೂಮಳೆ ಸುರಿಸಿ ಭಾರತ ಮಾತೆಗೆ ಜೈಕಾರ ಹಾಕಿದರು. ಜತೆಗೆ ಶಾಲಾ ಮಕ್ಕಳು ದೇಶದ ಮಹಾನೀಯರ ವೇಷಭೂಷಣ ಧರಿಸಿ ಸಂಭ್ರಮಿಸಿದರು.

ನಗರದ ಗದ್ವಾಲ್ ರಸ್ತೆ, ಲಕ್ಷ್ಮಮ್ಮ ದೇವಿ ದೇವಸ್ಥಾನ ರಸ್ತೆ, ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತ, ಶೆಟ್ಟಿಬಾವಿ ವೃತ್ತ, ಸರಫ್ ಬಜಾರ್, ತೀನ್ ಕಂದಿಲ್ ವೃತ್ತ, ಸೂಪರ್ ಮಾರ್ಕೇಟ್, ಮಹಾವೀರ ವೃತ್ತ, ಹರಿಹರ ರಸ್ತೆ, ಚಂದ್ರಮೌಳೇಶ್ವರ ವೃತ್ತ, ಬಸವನಬಾವಿ ವೃತ್ತದಲ್ಲಿ ಪಥಸಂಚಲನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net