ನಾಳೆ ಸದ್ಗುರು ಶರೀಫ ನಾಟಕ ಪ್ರದರ್ಶನ: ದಾನಪ್ಪ‌ ಮಸ್ಕಿ

PRESS MEET (2)
Published on

ರಾಯಚೂರು: ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಹಾಗೂ ಕ್ರಾಂತಿ ಕಲಾ ಸಂಘದಿಂದ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನಕವಿ ಸಿ.ದಾನಪ್ಪ ಮಸ್ಕಿ ನಿಲೋಗಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ನ.8ರ ಸಂಜೆ 4 ಗಂಟೆಗೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಾಮ್ರೇಡ್ ಆರ್.ಹುಚ್ಚರೆಡ್ಡಿ ರಂಗ ಸಜ್ಜಿಕೆಯಲ್ಲಿ ಸದ್ಗುರು ಶರೀಫ ಎಂಬ ಸಾಂಸ್ಕೃತಿಕ ವೈಚಾರಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ. ಕ್ರಾಂತಿ ಕಲಾ ಸಂಘದಿಂದ ಹಮ್ಮಿಕೊಳ್ಳುತ್ತಿರುವ ಚೊಚ್ಚಲ ನಾಟಕ ಇದಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಕವಿ ಕೋಟೆಗಾನಹಳ್ಳಿ ರಾಮಯ್ಯ ಕೋಲಾರ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಂತಕ ಆರ್.ಮಾನಸಯ್ಯ, ಕಸಾಪದ ಮಾಜಿ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ, ಕಸಾಪ ಲಿಂಗಸುಗೂರು ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಪ್ರಮುಖರಾದ ತಾಯಣ್ಣ ಯರಗೇರಾ, ಹನುಮಂತಪ್ಪ ಮನ್ನಾಪೂರಿ, ಗೌರಿ ಗೋನಾಳ ಸೇರಿದಂತೆ ಇತರರು ಉಪಸ್ಥಿತರಿರಲಿದ್ದಾರೆ ಎಂದರು.

ಇದೇ ವೇಳೆ ನಾಟಕದ ರಚನಾಕಾರ ಹಾಗೂ ನಿರ್ದೇಶಕ ರಂಜಾನ್‌ಸಾಬ್ ಉಳ್ಳಾಗಡ್ಡಿ ಮಾತನಾಡಿ, ನಾಡನ್ನು ಕಟ್ಟುವಲ್ಲಿ ಶರಣರ, ಸೂಫಿ ಸಂತರು, ಧಮನಿತರ ಪಾತ್ರ ಏನೆಂಬುದರ ಬಗ್ಗೆ, ಶರಣರು ಪವಾಡ ಪುರುಷರಲ್ಲ, ಮಾನವೀಯತೆಯನ್ನು ಹೊಂದಿದ ಶ್ರೇಷ್ಠ ವ್ಯಕ್ತಿಗಳು ಎನ್ನುವ ಅಂಶವನ್ನು ಹಾಗೂ ಜಾತಿ, ಧರ್ಮ ಯಾವುದೂ ಇಲ್ಲ ಮಾನವ ಧರ್ಮವೊಂದೇ ಎಂಬ ಸಂದೇಶವನ್ನು ನಾಟಕದ ಮೂಲಕ ಪ್ರಸ್ತುತಪಡಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಲಾವಿದರಾದ ಎಂ.ಗಂಗಾಧರ, ಆದೇಶ ನಾಗನೂರು, ಪ್ರಮುಖರಾದ ಅಜೀಜ್, ನಿರಂಜನಕುಮಾರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net