ಅಪರೂಪದ ರಾಜಕಾರಣಿ ನಿಜಲಿಂಗಪ್ಪ ಎಂದ ನಗರಸಭೆ ಅಧ್ಯಕ್ಷ ಇ.ವಿನಯಕುಮಾರ

101221 Raichur S Nijalingappa 120th Birthday
ರಾಯಚೂರಿನ ನಿಜಲಿಂಗಪ್ಪ ಕಾಲನಿಯಲ್ಲಿ ಹಿರಿಯ ನಾಗರಿಕರ ವೇದಿಕೆಯಿಂದ ಶುಕ್ರವಾರ ಮಾಜಿ ಸಿಎಂ ಎಸ್.ನಿಜಲಿಂಗಪ್ಪ 120ನೇ ಜನ್ಮದಿನ ಆಚರಿಸಲಾಯಿತು.
Published on

ರಾಯಚೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಎಸ್.ನಿಜಲಿಂಗಪ್ಪ ಒಬ್ಬರು. ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದು ನಗರಸಭೆ ಅಧ್ಯಕ್ಷ ಇ.ವಿನಯಕುಮಾರ ಹೇಳಿದರು.

ಇಲ್ಲಿನ ನಿಜಲಿಂಗಪ್ಪ ಕಾಲನಿಯಲ್ಲಿ ಹಿರಿಯ ನಾಗರಿಕರ ವೇದಿಕೆಯಿಂದ ಶುಕ್ರವಾರ ಎಸ್.ನಿಜಲಿಂಗಪ್ಪರ ಜನ್ಮ ದಿನಾಚರಣೆ ನಿಮಿತ್ತ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಕೇವಲ ರಾಜ್ಯ ಮಾತ್ರವಲ್ಲ, ಜಿಲ್ಲೆ ಅಭಿವೃದ್ಧಿಗೂ ಅವರ ಕೊಡುಗೆ ದೊಡ್ಡದು ಎಂದರು.

ನಗರಸಭೆ ಸದಸ್ಯ ಶರಣಬಸವ ಬಲ್ಲಟಗಿ ಮಾತನಾಡಿ, ನಗರಕ್ಕೆ ನಿಜಲಿಂಗಪ್ಪನವರ ಕೊಡುಗೆ ಗುರುತಿಸಿ ಬಡಾವಣೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದರು. ವೇದಿಕೆ ಅಧ್ಯಕ್ಷ ವಿರುಪನಗೌಡ, ಪದಾಧಿಕಾರಿಗಳಾದ ಎಸ್.ಎಂ.ಸಿದ್ಧಾರೆಡ್ಡಿ, ವೀರನಗೌಡ ಮಟಮಾರಿ, ಮಹಾದೇವಪ್ಪ, ಸದಾಶಿವಪ್ಪ, ಬಸನಗೌಡ, ಶೇಖರಪ್ಪಗೌಡ, ಲಿಂಗನಗೌಡ ಹರವಿ, ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net