ಮಳೆಯಿಂದ ತಂಪಾದ ಇಳೆ- ಸ್ವಲ್ಪ ಗಾಳಿ, ಕೈ ಕೊಟ್ಟ ವಿದ್ಯುತ್

020620 Raichur Rain Fall
Published on

ರಾಯಚೂರು: ಜಿಲ್ಲಾದ್ಯಂತ ಸೋಮವಾರ ರಾತ್ರಿ ಗುಡುಗು, ಗಾಳಿ ಮಿಶ್ರಿತ ಮಳೆ ಸುರಿದಿದೆ. ಈ ಮಳೆ, ಗಾಳಿಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಮುಂಗಾರು ಪ್ರವೇಶಕ್ಕೂ ಮುನ್ನವೆ ಜಿಲ್ಲಾದ್ಯಂತ ಮಳೆರಾಯ ತನ್ನ ಕೃಪೆ ತೋರಿದ್ದಾನೆ. ತುಸು ಮಳೆಯಾ ಗಿದ್ದರಿಂದ ಮಂಗಳವಾರ ಇಡೀ ದಿನ ಮೋಡ ಕವಿದ ವಾತಾವರಣದಿಂದಾಗಿ ಸೂರ್ಯನ ಪ್ರಖರತೆ ತಗ್ಗಿತ್ತು.

ರಾಯಚೂರು ತಾಲೂಕಿನಲ್ಲಿ 25 ಮಿಮೀ ಮಳೆಯಾಗಿದ್ದರೆ, ಮಾನ್ವಿ 19, ದೇವದುರ್ಗ 13, ಲಿಂಗಸುಗೂರು 10, ಸಿಂಧನೂರು 16 ಮಿಮೀ ಮಳೆಯಾಗಿದೆ. ಜಿಲ್ಲಾದ್ಯಂತ ಸರಾಸರಿ 3 ಮಿಮೀ ಮಳೆಯಾಗಬೇಕಿತ್ತು, 16 ಮಿಮೀ ಮಳೆ ದಾಖಲಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net