ರಾಯಚೂರು ಹೊರ ವಲಯದ ಕ್ವಾರಂಟೈನ್ ಕೇಂದ್ರದ ಮುಂದೆ ಬ್ರೆಡ್, ಮೊಟ್ಟೆ ಮಾರಾಟ !

230520 Raichur Quarantine Center Egg, Bread Sales
Published on

ರಾಯಚೂರು: ಹೊರ ರಾಜ್ಯಗಳಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿರುವ ಜನರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಸಂದರ್ಭದಲ್ಲಿ ಕೇಂದ್ರದ ಮುಂದೆಯೆ ಬ್ರೆಡ್, ಬಿಸ್ಕತ್ ಮಾರಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ನಗರದ ಹೊರವಲಯದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ಮುರಾರ್ಜಿ ವಸತಿ ಶಾಲೆಯಲ್ಲಿ ಆಂಧ್ರ ಮತ್ತು ತೆಲಂಗಾಣದ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಕೇಂದ್ರದ ಮುಂದೆ ಪೊಲೀಸ್ ಭದ್ರತೆ ನಡುವೆಯೂ ಕೇಂದ್ರದ ಮುಂದೆ ಬ್ರೆಡ್, ಮೊಟ್ಟೆ ಮಾರಾಟ ನಡೆಯುತ್ತಿದೆ. ಕ್ವಾರಂಟೈನ್‌ನಲ್ಲಿರುವ ಮಹಿಳೆ, ಮಕ್ಕಳು ಮತ್ತು ಪುರುಷರು ಹೊರಬಂದು ಬ್ರೆಡ್, ಬಿಸ್ಕತ್, ಮೊಟ್ಟೆ ಖರೀದಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net