ತಾರಾನಾಥರ ಆದರ್ಶ ಇತರರಿಗೆ ಪ್ರೇರಣೆ

06062021 Raichur Pt Taranath birth aniversary
Published on

ರಾಯಚೂರು: ಶೈಕ್ಷಣಿಕವಾಗಿ ಹಿಂದುಳಿದಿದ್ದ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದ ಶಾಲೆಯನ್ನು ಆರಂಭಿಸುವ ಮೂಲಕ ಅಕ್ಷರ ಕ್ರಾಂತಿ ಜತೆಗೆ ಸ್ವಾತಂತ್ರೃಕ್ಕಾಗಿ ಹೋರಾಟ ನಡೆಸಿದ ಪಂ.ತಾರಾನಾಥರ ಆದರ್ಶ ಎಲ್ಲರಿಗೂ ಪ್ರೇರಣೆ ಎಂದು ಹಮದರ್ದ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕೆ.ಶಾಂತಪ್ಪ ಹೇಳಿದರು.

ತಾರಾನಾಥ ಶಿಕ್ಷಣ ಸಂಸ್ಥೆಯ ಹಮದರ್ದ್ ಶಾಲೆ ಆವರಣದಲ್ಲಿ ಭಾನುವಾರ ಪಂ.ತಾರಾನಾಥರ 130ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು. ತಾರಾನಾಥರು ಕನ್ನಡ ಮತ್ತು ಶಿಕ್ಷಣ ಪ್ರೇಮಿ ಆಗಿದ್ದರ ಜತೆಗೆ ಸಂಗೀತ, ಆಯುರ್ವೇದ, ಸಾಹಿತ್ಯ, ಯೋಗ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಅವಿಸ್ಮರಣೀಯ. 1920ರಲ್ಲಿ ಹಮದರ್ದ ಶಾಲೆ ಸ್ಥಾಪಿಸುವ ಮೂಲಕ ಅಕ್ಷರ ಕ್ರಾಂತಿ ಮಾಡಿ, ಗುಣಾತ್ಮಕ ಶಿಕ್ಷಣ ನೀಡುವ ಕಾರ್ಯ ನಡೆಸಿದರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net