ಪ್ರಕರಣ ಹಿಂಪಡೆಯಲು ಅಂಬೇಡ್ಕರ್ ಸೇನೆ ಒತ್ತಾಯ

181220 Raichur Ambadkar Sene Appeal
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್‌ಗೆ ಅಂಬೇಡ್ಕರ್ ಸೇನೆಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
Published on

ರಾಯಚೂರು: ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್‌ಗೆ ಅಂಬೇಡ್ಕರ್ ಸೇನೆ ಒತ್ತಾಯಿಸಿದೆ.

ವಾರ್ಡ್ ಸಂಖ್ಯೆ ಮೂರಲ್ಲಿನ ರಸ್ತೆ, ಕುಡಿಯುವ ನೀರು ಸೇರಿದಂತೆ ಇತರ ಸಮಸ್ಯೆ ನಿವಾರಣೆಗಾಗಿ 2019ರ ಆ.7ರಂದು ಪ್ರತಿಭಟನೆ ನಡೆಸಲಾಗಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರೂ ಸಂಘಟನೆಯ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೋರಾಟಗಾರರಿಗೂ ಮಾಹಿತಿ ನೀಡಿಲ್ಲ. ಕಳೆದ ವಾರ ಸಮನ್ಸ್ ಬಂದಾಗ ವಿಷಯ ತಿಳಿದಿದೆ. ಇದು ಹೋರಾಟ ಹತ್ತಿಕ್ಕುವ ಕೆಲಸ ಎಂದು ದೂರಿದರು. ಇದಕ್ಕೂ ಮೊದಲು ಸಂಘಟನೆ ಕಾರ್ಯಕರ್ತರು ಸ್ಥಳೀಯ ಗಂಜ್ ವೃತ್ತದಿಂದ ಶುಕ್ರವಾರ ಮೆರವಣಿಗೆ ಮೂಲಕ ಎಸ್ಪಿ ಕಚೇರಿಗೆ ತೆರಳಿದರು.

ಸಂಘಟನೆ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ಪದಾಧಿಕಾರಿಗಳಾದ ಈ.ಕುಮಾರಸ್ವಾಮಿ, ಮಹೇಶಕುಮಾರ್, ಕೆ.ಸಂತೋಷ, ಭೀಮೇಶ ಕುರ್ಡಿ, ರವಿಚಂದ್ರ, ಉಮೇಶ ಕೂಡ್ಲೂರು, ಶಿವರಾಜ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net