ಪೊಲೀಸ್ ಇಲಾಖೆಯ ಸಿರಿ ಶ್ವಾನ ನಿಧನ

IMG-20241111-WA0006
Published on

ರಾಯಚೂರು: ರಾಯಚೂರು ಪೊಲೀಸ್ ಇಲಾಖೆಯಲ್ಲಿ ಕಳೆದ 7 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಸಿರಿ ಎಂಬ ಶ್ವಾನವು ಸೋಮವಾರ ಸಾವನಪ್ಪಿದೆ.

2017ರಿಂದ ಇಲ್ಲಿಯವರೆಗೆ 171 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಸಿರಿ ಸೆ.26ರಂದು ಕೊನೆಯದಾಗಿ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿತ್ತು.

2022ರ ಜು.22 ರಂದು ಮಾನ್ವಿಯ ಪೋಸ್ಟ್ ಆಫೀಸ್ ಕಳ್ಳತನ ಪ್ರಕರಣದಲ್ಲಿ ಮಹತ್ವದ ಸುಳಿವು ನೀಡಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. 2018 ಹಾಗೂ 2020ನೇ ಸಾಲಿನ ವಲಯ ಮಟ್ಟದ ಪೊಲೀಸ್ ಡ್ಯೂಟಿ ಮೀಟ್‌ನಲ್ಲಿ ಪ್ರಥಮ ಸ್ಥಾನ ಹಾಗೂ 2020ನೇ ಸಾಲಿನ ರಾಜ್ಯ ಮಟ್ಟದ ಪೊಲೀಸ್ ಡ್ಯೂಟಿ ಮೀಟ್‌ನಲ್ಲಿ ಪ್ರಥಮ ಸ್ಥಾನ ಗಳಿಸಿತ್ತು.

ತನ್ನ ಚಾಕಚಕ್ಯತೆ ಮತ್ತು ಸಾಮರ್ಥ್ಯದಿಂದ ಗುರುತಿಸಿಕೊಂಡಿದ್ದ ಸಿರಿ ಅನೇಕ ಕಾರ್ಯಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಕೆಲಸ ಮಾಡಿತ್ತು ಹಾಗೂ ರಾಯಚೂರು ಪೊಲೀಸ್ ಶ್ವಾನದಳದ ಪ್ರಮುಖ ಶ್ವಾನವಾಗಿತ್ತು. ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಹೆಸರು ವಾಸಿಯಾಗಿತ್ತು. ತನ್ನ ಬುದ್ದಿವಂತಿಕೆ, ಸೇವಾ ಮನೋಭಾವದಿಂದ ಅಸಾಧಾರಣ ಸೇವೆಯನ್ನು ಸಲ್ಲಿಸಿತ್ತು.

ಸಿರಿ ನಿಧನಕ್ಕೆ ಎಸ್ಪಿ ಎಂ.ಪುಟ್ಟಮಾದಯ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net