ರಾಯಚೂರು ನಗರದಿಂದ ಇ.ವಿನಯಕುಮಾರ ಕಣಕ್ಕೆ

23012023 raichur m virupakshi
Published on

ರಾಯಚೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೈಗೊಂಡಿರುವ ಪಂಚರತ್ನ ಯಾತ್ರೆ ಜ.24ರಂದು ಬಾದಾಮಿಯಿಂದ ಮುದಗಲ್‌ಗೆ ಆಗಮಿಸಲಿದ್ದು, ಜಿಲ್ಲೆಯಲ್ಲಿ ಆರು ದಿನ ಸಂಚರಿಸಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಜ.24ರಂದು ಮುದಗಲ್, ಲಿಂಗಸುಗೂರು, 25ರಂದು ದೇವದುರ್ಗ, 26ರಂದು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ. ಯರಗೇರಾ, ಚಂದ್ರಬಂಡಾ ಮೂಲಕ ದೇವಸುಗೂರಿಗೆ ತೆರಳಿ ಅಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದರು.

ಜ.27ರಂದು ಸಂಜೆ 5ಕ್ಕೆ ರಾಯಚೂರಿನ ರಾಮಲಿಂಗೇಶ್ವರ ಮೈದಾನದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ. ನಗರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಇ.ವಿನಯಕುಮಾರ ಹೆಸರು ಪ್ರಕಟಿಸಲಾಗುವುದು. ಜ.28ರಂದು ಮಾನ್ವಿ ಮತ್ತು ಜ.29ರಂದು ಸಿಂಧನೂರಿನಲ್ಲಿ ಯಾತ್ರೆ ನಡೆಯಲಿದೆ ಎಂದು ಎಂ.ವಿರೂಪಾಕ್ಷಿ ತಿಳಿಸಿದರು. ರಾಯಚೂರು ಗ್ರಾಮೀಣ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಶಿವಶಂಕರ, ಪದಾಧಿಕಾರಿಗಳಾದ ಲಕ್ಷ್ಮೀಪತಿ ಗಾಣಧಾಳ, ವಿಶ್ವನಾಥ ಪಾಟೀಲ್, ಅಮರೇಶ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net