ಪಂಚರತ್ನ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿ

B.VIRUPAKSHI-JDS
Published on

ರಾಯಚೂರು: ಪಂಚರತ್ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾಗಿದೆ. ಪಂಚರತ್ನ ಯಾತ್ರೆ ರಾಯಚೂರಿಗೆ ಜ.26ರಂದು ಆಗಮಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಕರ್ತರು ಕೈಜೋಡಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.

ಗಾಣಧಾಳದ ಪಂಚಮುಖಿಯಲ್ಲಿ ಜೆಡಿಎಸ್ ಗ್ರಾಮ ಘಟಕದಿಂದ ಆಯೋೀಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾನುವಾರ ಮಾತನಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಶಿವಶಂಕರ ಮಾತನಾಡಿ ಜಿಲ್ಲೆಯಲ್ಲಿ ಪಂಚರತ್ನ ಯೋಜನೆ ಯಾತ್ರೆ ಐತಿಹಾಸಿಕವಾಗಿಸಲು ಮುಖಂಡರು, ಕಾರ್ಯಕರ್ತರು ಸಿದ್ಧರಾಗಬೇಕು ಎಂದರು.

ರಾಯಚೂರು ಗ್ರಾಮೀಣ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಸಣ್ಣ ನರಸಿಂಹನಾಯಕ, ರಾಜ್ಯ ಕಾರ್ಯದರ್ಶಿ ಲಕ್ಷೀಪತಿ, ತಾಲೂಕು ಕಾರ್ಯಾಧ್ಯಕ್ಷ ಅಮರೇಶ ಪಾಟೀಲ್, ಪ್ರಮುಖರಾದ ನಿಜಾಮುದ್ದಿನ್, ಅಮರೇಶ ಹೊಸಮನಿ, ಭೀಮರೆಡ್ಡಿ ಸರ್ಜಾಪುರ, ವಿಶ್ವನಾಥ ಪಟ್ಟಿ, ಫಾತಿಮಾ ಹಸನ್ ಶಾಲಂ, ಶಿವರಾಜ, ತಿಮ್ಮಪ್ಪ, ಮಲ್ಲಿಕಾರ್ಜುನ, ವಿಶ್ವನಾಥ ಪಾಟೀಲ್, ಬಸಪ್ಪ, ಮಹಿಬೂಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net