ಸಂಗೀತ ಸಮ್ಮೇಳನ ಜು.28ಕ್ಕೆ: ಸೂಗುರೇಶ ಅಸ್ಕಿಹಾಳ್‍

SUGURESH.A
ಸೂಗುರೇಶ ಅಸ್ಕಿಹಾಳ
Published on

ರಾಯಚೂರು: ಪಂ.ಪಂಚಾಕ್ಷರಿ ಗವಾಯಿಗಳ ಸಂಸ್ಥೆ ವತಿಯಿಂದ ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆಯ ಅಂಗವಾಗಿ 44ನೇ ಸಂಗೀತ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸೂಗುರೇಶ ಅಸ್ಕಿಹಾಳ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಶುಕ್ರವಾರ ಮಾತನಾಡಿ, ಜು,28ರ ಬೆಳಿಗ್ಗೆ 9 ಗಂಟೆಯಿಂದ ನಗರದ ಗಣದಿನ್ನಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಹಿಂದೂಸ್ಥಾನಿ ಗಾಯನ, ಸಿತಾರ್-ಸರೋದ್ ಜುಗಲ್‌ಬಂದಿ, ತಬಲ ಜುಗಲ್‌ಬಂದಿ ಸೇರಿದಂತೆ ವಿವಿಧ ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಹಾಗೂ ಗಬ್ಬೂರು ಮಠದ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ  ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದು, ಹಿಂದುಸ್ಥಾನಿ ಸಂಗೀತವನ್ನು ಮುಂಬೈ ಕಲಾವಿದ ಪಂ.ನಿಷಾದ್ ಬಾಕ್ರೆ ನಡೆಸಿಕೊಡಲಿದ್ದಾರೆ. ಪಂ ಅರಣ್ಯಕುಮಾರ್ ಹಾಗೂ ಪಂ.ಸಚಿನ್ ಹಂಪೆ ಅವರಿಂದ ಸಿತಾರ್-ಸರೂದ್ ಜುಗಲ್‌ಬಂದಿ ಹಾಗೂ ಪಂ.ಭೀಮಾಶಂಕರ್ ಹಾಗೂ ಕು.ಪಂಚಮಿ ಅವರಿಂದ  ತಬಲ ಜುಗಲ್‌ಬಂದಿ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ಇಬ್ರಾಹಿಂ, ವೆಂಕಟೇಶ್, ಸುಧಾಕರ್, ವಿಜಯ್‌ಕುಮಾರ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net