ಮಾ.12ರಂದು ಡಾ.ಖಾದರ್ ವಲಿ ಉಪನ್ಯಾಸ

Channappa Budinal
ಚನ್ನಪ್ಪ ಬೂದಿನಾಳ
Published on

ರಾಯಚೂರು: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಾ.12ರಂದು ಸಂಜೆ 5.30ಕ್ಕೆ ದೇಸಿ ಆಹಾರ, ಸಿರಿಧಾನ್ಯ ಮತ್ತು ಕಷಾಯಗಳ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಚನ್ನಪ್ಪ ಬೂದಿನಾಳ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಆಹಾರ ತಜ್ಞ ಡಾ.ಖಾದರ್ ವಲಿ ಉಪನ್ಯಾಸ ನೀಡಲಿದ್ದು, ಉತ್ತಮ ಆಹಾರ, ಸಿರಿಧಾನ್ಯಗಳ ಸೇವನೆ ಮಹತ್ವ, ಅವುಗಳ ಬಳಕೆಯಿಂದಾಗುವ ಪ್ರಯೋಜನ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು. ಆಯೋಜಕರಾದ ಆನಂದ ಪಾಟೀಲ್, ಚಂದ್ರಶೇಖರ್, ಡಿ.ಕೆ.ಮುರಳೀಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net