ಹಳೆಯ ವಿತರಕ ಮುಂದುವರಿಸಲು ರಾಯಚೂರಿನ ರಾಂಪೂರ ಬಡಾವಣೆ ನಿವಾಸಿಗಳ ಆಗ್ರಹ

121022 Raichur Rampura Colony Resident Appeal
ವಾರ್ಡ್ ನಂ.35ರ ನ್ಯಾಯಬೆಲೆ ಅಂಗಡಿಗೆ ಹಳೆಯ ವಿತರಕರನ್ನು ನಿಯೋಜಿಸುವಂತೆ ಡಿಸಿ ಕಚೇರಿ ಆವರಣದಲ್ಲಿ ವಾರ್ಡ್ ನಿವಾಸಿಗಳು ಕಚೇರಿಯ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿದರು.
Published on

ರಾಯಚೂರು: ನಗರದ ವಾರ್ಡ್ ನಂ.35ರ ರಾಂಪೂರ ನ್ಯಾಯಬೆಲೆ ಅಂಗಡಿಯನ್ನು ಹಳೆಯ ವಿತರಕರಿಗೆ ನೀಡುವಂತೆ ಹಾಗೂ ಮೂಲಸೌಲಭ್ಯಗಳಿಗಾಗಿ ಒತ್ತಾಯಿಸಿ, ರಾಂಪೂರ ನಿವಾಸಿಗಳು ಹೋರಾಟ ಸಮಿತಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿದರು.

ನಗರದ ವಾರ್ಡ್ ನಂ.35ರ ರಾಂಪೂರದಲ್ಲಿ ಕಳೆದೆರಡು ವರ್ಷಗಳಿಂದ ನ್ಯಾಯಬೆಲೆ ಅಂಗಡಿ ನಡೆಸಿಕೊಂಡು ಹೋಗುತ್ತಿದ್ದ ವಿತರಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಾಲಕ್ಕೆ ಸರಿಯಾಗಿ ಆಹಾರ ಪದಾರ್ಥಗಳು ಸಿಗುತ್ತಿದ್ದವು. ಆದರೆ ಇತ್ತೀಚೆಗೆ ನ್ಯಾಯಬೆಲೆ ಅಂಗಡಿಯನ್ನು ಬೇರೆಯವರು ವಹಿಸಿಕೊಂಡಿದ್ದು, ಇನ್ನು ಮುಂದೆ ತಾವೇ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥ ವಿತರಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಕೂಡಲೇ ಹಿಂದೆ ಇದ್ದ ವಿತರಕರನ್ನು ನ್ಯಾಯಬೆಲೆ ಅಂಗಡಿಗೆ ಮುಂದುವರಿಸುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net