ಕೌಶಲ, ನಿಪುಣತೆ ಮುಖ್ಯ-ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ರಾಜೇಶ ಬಾವಗಿ ಅಭಿಮತ

Raichur World Skill Day
ರಾಯಚೂರಿನ ಜನ ಶಿಕ್ಷಣ ಸಂಸ್ಥಾನ ಸಭಾಂಗಣದಲ್ಲಿ ಶುಕ್ರವಾರ ಸ್ವಚ್ಛತಾ ಪಾಕ್ಷಿಕ ಅಭಿಯಾನ ಹಾಗೂ ವಿಶ್ವ ಯುವ ಕೌಶಲ ದಿನಾಚರಣೆಯನ್ನು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ರಾಜೇಶ ಬಾವಗಿ ಉದ್ಘಾಟಿಸಿದರು.
Published on

ರಾಯಚೂರು: ಹೊಸ ಉದ್ಯಮ ಆರಂಭಿಸಲು ಉದ್ದಿಮೆದಾರರಿಗೆ ಕೌಶಲ ಮತ್ತು ನಿಪುಣತೆ ಮುಖ್ಯ. ಕೌಶಲ್ಯದಿಂದ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧ್ಯ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ರಾಜೇಶ ಬಾವಗಿ ಹೇಳಿದರು. ಜನ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶುಕ್ರವಾರ ಸ್ವಚ್ಛತಾ ಪಾಕ್ಷಿಕ ಅಭಿಯಾನ ಹಾಗೂ ವಿಶ್ವ ಯುವ ಕೌಶಲ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ತರಬೇತುದಾರ ವಿ.ಹೇಮಂತ ಮಾತನಾಡಿ, ಗುಡಿ ಕೈಗಾರಿಕೆ ಮತ್ತು ಕುಲಕಸಬು ಆರಂಭಕ್ಕೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳ ಸದುಪಯೋಗ ಪಡೆದು, ಸ್ವಾವಲಂಬಿ ಜೀವನ ನಡೆಸಬೇಕು ಎಂದರು. ಸಂಸ್ಥೆ ನಿರ್ದೇಶಕ ಎಂ.ಪಿ.ಸದಾನಂದ ಮಾತನಾಡಿ, ಇಂದಿನ ದಿನಮಾನದಲ್ಲಿ ಕೌಶಲ ಸಾಮರ್ಥ್ಯಕ್ಕೆ ಹೆಚ್ಚಿನ ಬೆಲೆಯಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net