ಸಾವಿನಲ್ಲೂ ಸಾರ್ಥಕತೆ ಮೆರೆದ ಸುಲೋಚನಾ

netradaana
ನವೋದಯ ಆಸ್ಪತ್ರೆಗೆ ನೇತ್ರಧಾನ ದ ಒಪ್ಪಗೆ ಪತ್ರ ನೀಡುತ್ತಿರುವ ಸುಲೋಚನಾ ಸಂಬಂಧಿಗಳು
Published on

ರಾಯಚೂರು: ನಗರದ ವಾಸವಿನಗರ ನಿವಾಸಿ ಸುಲೋಚನ(67) ಅನಾರೋಗ್ಯದಿಂದ ಸೋಮವಾರ ತೀರಿಕೊಂಡಿದ್ದು, ಬದುಕಿರುವಾಗ ನೇತ್ರಧಾನಕ್ಕೆ ನೊಂದಣಿ ಮಾಡಿಕೊಂಡಿದ್ದರಿಂದ ಅವರ ಕುಟುಂಬಸ್ಥರು ಮೃತರ ಕಣ್ಣನ್ನು(ಕಾರ್ನಿಯಾ) ನವೋದಯ ನೇತ್ರ ನಿಧಿಗೆ ಧಾನ ಮಾಡಿದ್ದಾರೆ.

ಮಕ್ಕಳಾದ ದಾಸರಿ ರಾಮಕೃಷ್ಣ , ಸುನೀತಾ ಬಾಲಮುರುಳಿ , ಅನುಪಮಾ, ರಾಘವೇಂದ್ರ ತಾಯಿಯ ಮರಣದ ದುಃಖದಲ್ಲಿಯೂ ಅವರ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ.

ನವೋದಯ ನೇತ್ರ ಬ್ಯಾಂಕ್‌ನ ವಿಭಾಗದ ಮುಖ್ಯಸ್ಥೆ ಡಾ.ಅನುಪಮಾ ಮಾರ್ಗದರ್ಶನದಲ್ಲಿ ವೈದ್ಯರಾದ ಮೇಘನಾ , ಶ್ವೇತಾ , ಭ್ಯಾಗ್ಯಶ್ರೀ, ಎಮ್.ಪಾಟೀಲ್ , ಮಹಾರಾಜೇ ನೇತ್ರದಾನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕುಟುಂಬಸ್ಥರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net