ನವರಾತ್ರಿ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆ: ಎ.ಪಾಪಾರೆಡ್ಡಿ

MUN NUR KAP[U SAMAJA PRESS MEET (1)
Published on

ರಾಯಚೂರು: ಮುನ್ನೂರು ಕಾಪು ಸಮಾಜದ ವತಿಯಿಂದ ಮಾತಾ ಮಹಾಲಕ್ಷ್ಮೀದೇವಿ ಹಾಗೂ ಮಾತಾ ಕಾಳಿಕಾದೇವಿ ನವರಾತ್ರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಎ.ಪಾಪಾರೆಡ್ಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಅ.3ರಿಂದ 11ರವರೆಗೆ ಗದ್ವಾಲ್ ರಸ್ತೆಯ ಮಹಾಲಕ್ಷ್ಮೀ ಮತ್ತು ಕಾಳಿಕದೇವಿ ದೇವಸ್ಥಾನದಲ್ಲಿ ದಸರಾ ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಪ್ರೌಢಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದರು.

ಜಾನಪದ ನೃತ್ಯ, ನವದುರ್ಗೆಯರ ನೃತ್ಯ, ಭರತ ನಾಟ್ಯ ಹಾಗೂ ಸಮೂಹ ಗೀತೆಗಳ ಕಾಲೇಜು ಮತ್ತು ಪ್ರೌಢ ಶಾಲೆ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ವಿಜೇತ ತಂಡಗಳಿಗೆ ಟ್ರೋಫಿ ಜತೆಗೆ ನಗದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಬೆಲ್ಲಂ ನರಸರೆಡ್ಡಿ, ಬಸರಾಜರೆಡ್ಡಿ, ಶೇಖರ್‌ರೆಡ್ಡಿ, ಚಂದ್ರಶೇಖರ್ ರೆಡ್ಡಿ, ಪ್ರತಾಪ್, ಕೃಷ್ಣಮೂರ್ತಿ, ಬಿ.ನರಸರೆಡ್ಡಿ, ಶ್ರೀನಿವಾಸರೆಡ್ಡಿ, ಗೋವಿಂದರೆಡ್ಡಿ, ಜಿ.ನರಸರೆಡ್ಡಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net