

ರಾಯಚೂರು: ನಗರದ ಆರ್ಯವೈಶ್ಯ ಶ್ರೀನಗರೇಶ್ವರ ದೇವಸ್ಥಾನದಲ್ಲಿ ಜಗನ್ಮಾತೆ ಶ್ರೀವಾಸವಿ ಕನ್ಯಕಾ ಪರಮೇಶ್ವರಿ ಮಾತೆಯ ಅಗ್ನಿ ಪ್ರವೇಶದ ಸಹಸ್ರಮಾನ ವಷರ್ ನಿಮಿತ್ತ ಹಾಗೂ ವಾಸವಿ ವಿಶ್ವರೂಪ ದರ್ಶನದ ಪ್ರಯುಕ್ತ ಶುಕ್ರವಾರ ವಿಶೇಷ ಹೋಮ ಜರುಗಿತು.
ಅಮ್ಮನವರಿಗೆ ಬೆಳಗ್ಗೆ ವಿಶೇಷ ಅಲಂಕಾರ ನೆರವೇರಿಸಿ ಅಭಿಷೇಕ, ಸುಪ್ರಭಾತ ಸೇರಿ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಮಹಾಮಂಗಳಾರತಿ ಉಡಿ ತುಂಬುವುದು ಕಾರ್ಯಕ್ರಮ ಜರುಗಿತು. ವಾಸವಿ ದೀಕ್ಷಾರ್ಥಿಗಳಿಂದ ಹಾಗೂ ಭಕ್ತ ಸಮೂಹದಿಂದ ವಿವಿಧ ಪೂಜಾ ವಿಧಿ ವಿಧಾನಗಳು ಅದ್ದೂರಿಯಾಗಿ ಜರುಗಿದವು. ದೇವಸ್ಥಾನ ಸಮಿತಿ ಮುಖಂಡರು, ಆರ್ಯವೈಶ್ಯ ಸಮುದಾಯದ ನೂರಾರು ಮಹಿಳೆಯರು ಭಾಗವಹಿಸಿದ್ದರು.