ಸ್ಮಶಾನದಲ್ಲಿ ಎಲ್ಲೆಂದರಲ್ಲಿ ಪಿಪಿಇ ಕಿಟ್‌ಗಳನ್ನು ಬೀಸಾಡಿದ ಆರೋಗ್ಯ ಇಲಾಖೆ

Raichur Mortuary PPE Kit
ರಾಯಚೂರಿನ ಹೊರವಲಯದಲ್ಲಿ ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗೆ ಗುರುತಿಸಲಾಗಿರುವ ಸ್ಮಶಾನ ಭೂಮಿಯಲ್ಲಿ ಎಲ್ಲೆಂದರಲ್ಲಿ ಬಿಸಾಡಿರುವ ಪಿಪಿಇ ಕಿಟ್‌ಗಳು.
Published on

ರಾಯಚೂರು: ಚಿಕಿತ್ಸೆ ಫಲಿಸದೆ ಮೃತಪಟ್ಟ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ನಡೆಸಿದ ನಂತರ ಸ್ಮಶಾನದಲ್ಲಿ ಪಿಪಿಇ ಕಿಟ್‌ಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಬಿಸಾಡಿ ಹೋಗುತ್ತಿದ್ದು, ಅವುಗಳು ಗಾಳಿ ಹಾರಿ ಅಕ್ಕಪಕ್ಕದ ಜಾಗದಲ್ಲಿ ಬೀಳುತ್ತಿವೆ. ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗಾಗಿ ನಗರದ ಹೊರವಲಯದ ಯರಮರಸ್ ಹತ್ತಿರದ ಭೂಮಿ ಗುರುತಿಸಲಾಗಿದೆ.

ಮೃತಪಟ್ಟವರ ಅಂತ್ಯಕ್ರಿಯೆ ಮಾಡುವಾಗ ಧರಿಸಿದ ಪಿಪಿಇ ಕಿಟ್‌ಗಳನ್ನು ಸ್ಮಶಾನದಲ್ಲಿಯೇ ಬಿಸಾಡಿ ಹೋಗುತ್ತಿರುವುದರಿಂದ ಆ ಪ್ರದೇಶದ ತುಂಬೆಲ್ಲ ಪಿಪಿಇ ಕಿಟ್‌ಗಳು ಕಾಣುತ್ತಿವೆ. ಹೆಚ್ಚಿನ ಗಾಳಿ ಬೀಸಿದಾಗ ಕಿಟ್‌ಗಳು ಹಾರಿ ಅಕ್ಕಪಕ್ಕದ ಜಮೀನುಗಳಿಗೆ ಬಂದು ಬೀಳುತ್ತಿವೆ. ಸಮೀಪದ ಯರಮರಸ್ ಗ್ರಾಮಸ್ಥರಲ್ಲಿ ಇದು ಆತಂಕವುಂಟು ಮಾಡಿದೆ. ಸೋಂಕಿತರ ಶವಗಳನ್ನು ಸಮರ್ಪಕ ಸುಡದಿರುವುದರಿಂದ ನಾಯಿಗಳು ಶವಗಳ ಮಾಂಸ ತಿಂದು ಓಡಾಡುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net