ಭಾರತ್ ಜೋಡೊ ಯಾತ್ರೆಯಿಂದ ಬಿಜೆಪಿಗೆ ನಡುಕ

121022 Mansalapura Bharat Jodo Yatra pre-meeting
ಮನ್ಸಲಾಪೂರದಲ್ಲಿ ಭಾರತ ಜೋಡೊ ಯಾತ್ರೆಯ ಪೂರ್ವಭಾವಿ ಸಭೆ.
Published on

ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿರುವ ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ನಡುಕ ಉಂಟಾಗಿದೆ. ಜಿಲ್ಲೆಯಲ್ಲಿ ಹಾದುಹೋಗುವ ಭಾರಯ್ ಜೋಡೋ ಯಾತ್ರೆಯಲ್ಲಿ ಎಲ್ಲ ಸಮುದಾಯದವರು ಭಾಗವಹಿಸಬೇಕೆಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.

ತಾಲೂಕಿನ ಮನ್ಸಲಾಪೂರದಲ್ಲಿ ಭಾರತ ಜೋಡೊ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿದರು. ಕನ್ಯಾಕುಮಾರಿಯಿಂದ ಕಾಶ್ಮಿರದವರೆಗೆ 3,700 ಕಿಮೀ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಇದರಿಂದ ಬಿಜೆಪಿಗೆ ಭಯ ಶುರುವಾಗಿದೆ. ಶೇ.80 ಗ್ರಾಮೀಣ ಕ್ರೇತ್ರದಲ್ಲಿ ಹಾದು ಹೊಗುತ್ತಿದೆ. ಕ್ಷೇತ್ರದ ಜನರು ಭಾಗವಹಿಸಿ ಯಾತ್ರೆಯನ್ನು ಬಲಬಡಿಸಬೇಕೆಂದರು.

ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಮುಜಾಹಿದ್, ದೇವಸುಗೂರು ಬ್ಲಾಕ್ ಅಧ್ಯಕ್ಷ ಕೆ.ಪಂಪಾಪತಿ, ಅಲ್ಪಸಂಖ್ಯಾತರ ಸೆಲ್ ಅಧ್ಯಕ್ಷ ಬಷೀರ್ ಹಳ್ಳಿ, ಒಬಿಸಿ ಘಟಕದ ಅಧ್ಯಕ್ಷ ನಾಗೇಂದ್ರಪ್ಪ, ಪ್ರಮುಖರಾದ ಸೈಯದ್ ಸಾಬ್, ಮಹಾದೇವಪ್ಪ ಗೌಡ, ಮಹಾದೇವ ಮರ್ಚೆಡ್ , ರಾಮಣ್ಣ ನಾಯಕ, ಮಲ್ಲಿಕಾರ್ಜುನ ನಾಯಕ, ಬಸವರಾಜ, ಶಶಿಕಲಾ ಭಿಮರಾಯ, ವೆಂಕಟೇಶ ನಾಯಕ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net